ಮಂಗಳೂರು: ಲಾಡ್ಜ್ ಒಂದರಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದ ಒಮಾನ್ ರಾಷ್ಟ್ರದ ಪ್ರಜೆ ಮತ್ತು ಹಿಮಾಚಲ ಪ್ರದೇಶದ ವ್ಯಕ್ತಿಯನ್ನು ಮಂಗಳೂರು ನಗರದ ಪೊಲೀಸರು ಇಂದು ಬಂಧಿಸಿದ್ದಾರ
ನಗರದ ಲಾಡ್ಜ್ ಒಂದರಲ್ಲಿ ಒಮಾನ್ ರಾಷ್ಟ್ರದ ಪ್ರಜೆ ಅಹ್ಮದ್ ಮತ್ತು ಹಿಮಾಚಲ ಪ್ರದೇಶದ ನಿವಾಸಿ ರಾಮ್ ಎಂಬಾತ ಸೆರೆಸಿಕ್ಕಿರುವ ಆರೋಪಿಗಳು. ಒಮಾನ್ ಪ್ರಜೆ ಅಹ್ಮದ್ ಆರು ತಿಂಗಳ ಹಿಂದೆ ಗೋವಾಕ್ಕೆ ಟೂರಿಸ್ಟ್ ವೀಸಾದಲ್ಲಿ ಬಂದಿದ್ದ. ಆದರೆ, ಅನಾರೋಗ್ಯಕ್ಕೀಡಾಗಿದ್ದ ಅಹ್ಮದ್ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಆನಂತರ ಚಿಕಿತ್ಸೆ ಪಡೆದು ಹೊರಬಂದಿದ್ದ. ಈ ನಡುವೆ ಆತನ ವೀಸಾ ಅವಧಿ ಮಾರ್ಚ್ ೩೧ಕ್ಕೆ ಮುಗಿದಿದ್ದು ಆಬಳಿಕ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಾನೆ.
ಪೊಲೀಸರು ಮಾಹಿತಿ ಪಡೆದು ಲಾಡ್ಜ್ ಗೆ ದಾಳಿ ನಡೆಸಿದ್ದು ಇಬ್ಬರನ್ನು ಬಂಧಿಸಿದ್ದಾರೆ. ಈ ವೇಳೆ ಅವರ ಬಳಿ ೫೦ ಗ್ರಾಂಜಾ ಮತ್ತು ಎರಡು ಗ್ರಾಮ್ ಎಂಡಿಎAಎ ಡ್ರಗ್ಸ್ ಪತ್ತೆಯಾಗಿದೆ. ಅಲ್ಲದೆ, ಇಬ್ಬರು ಕೂಡ ಡ್ರಗ್ಸ್ ಸೇವನೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ
ಅಹ್ಮದ್ ವಿರುದ್ಧ ಅಕ್ರಮ ವಾಸ ಮತ್ತು ಮಾದಕ ದ್ರವ್ಯ ಹೊಂದಿದ್ದ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಲಾಡ್ಜ್ ನಲ್ಲಿ ಯಾವುದೇ ವ್ಯಕ್ತಿಗಳ ಗುರುತು ಪತ್ರ ಇಲ್ಲದೆ ಕೊಠಡಿ ನೀಡಬಾರದು. ಹಾಗೊಂದ್ವೇಳೆ, ಗುರುತು ಕಾರ್ಡ್ ಇಲ್ಲದೆ ಲಾಡ್ಜ್ ನಲ್ಲಿ ಅಕ್ರಮ ವಾಸ ಪತ್ತೆಯಾದರೆ ಅಂತಹ ಲಾಡ್ಜ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಇನ್ನು ಮುಂದೆ ಈ ಬಗ್ಗೆ ಅನಿಯಮಿತವಾಗಿ ದಾಳಿ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.