ಸಮಗ್ರ ನ್ಯೂಸ್: ಸುಳ್ಯದ ಹಳಗೇಟಿನ ವಿದ್ಯಾನಗರದಲ್ಲಿರುವ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ 23 ನೇ ವರ್ಷದ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರ ಮಾ.16ರಂದು ಉದ್ಘಾಟನೆ ಗೊಂಡಿತು.
ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ನಡೆಯುವ ಶಿಬಿರದವನ್ನು ಶಿಬಿರದ ಹಿರಿಯ ವಿದ್ಯಾರ್ಥಿ, ಬೆಂಗಳೂರಿನ ಕೋಮ್ಸ್‌ಕೋಪ್ ಆರ್&ಡಿ ಕಂಪೆನಿಯ ಇಂಜಿನಿಯರ್ ಶ್ರೀನಿಧಿ ಉಪಾಧ್ಯಾಯ ಅಡಿಕೆಹಿತ್ತು, ಭರತನಾಟ್ಯ ಹಾಗೂ ಸಂಗೀತ ಶಿಕ್ಷಕಿ ವಿದುಷಿ ಪ್ರಾಂಜಲಿ ಉಪಾಧ್ಯಾಯ ದಂಪತಿಗಳು ಉದ್ಘಾಟನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ವೇದ ಶಿಬಿರದ ಅಧ್ಯಾಪಕ, ಜ್ಯೋತಿಷಿ ವೇ|ಮೂ| ಸುದರ್ಶನ ಭಟ್ಟ ಉಜಿರೆ ವಹಿಸಿದ್ದರು. ದಿಕ್ಕೂಚಿ ಉಪನ್ಯಾಸವನ್ನು ಸರಕಾರಿ ಸಂಸ್ಕೃತ ಕಾಲೇಜು ಮೇಲುಕೋಟೆ ಇದರ ನಿವೃತ್ತ ಪ್ರಾಂಶುಪಾಲ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಮಾಡಿದರು.
23 ನೇ ವರ್ಷದ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರ ಏ.16 ರಿಂದ ಮೇ.14ರ ವರೆಗೆ ನಡೆಯಲಿದೆ.