ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್’ನ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು, ಮಂಗಳೂರು ದಕ್ಷಿಣಕ್ಕೆ ಲೋಬೋ ಅವರಿಗೆ, ಪುತ್ತೂರು ಕ್ಷೇತ್ರದಿಂದ ಅಶೋಕ್ ಕುಮಾರ್ ರೈ ಅವರಿಗೆ ಟಿಕೆಟ್ ನೀಡಲಾಗಿದೆ.
ಮಂಗಳೂರು ಉತ್ತರಕ್ಕೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ. ಇಲ್ಲಿ ಇನಾಯತ್ ಅಲಿ ಹಾಗೂ ಮೊಯ್ದೀನ್ ಬಾವ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಹೈಕಮಾಂಡ್ ಗೆ ಇದು ಕಗ್ಗಂಟಾಗಿದೆ.
ನಿರೀಕ್ಷೆಯಂತೆ ಲಕ್ಷ್ಮಣ ಸವದಿ ಅವರಿಗೆ ಅಥಣಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಬೆಳಗಾವಿ ಉತ್ತರದಲ್ಲಿ ಆಸೀಫ್ ಸೇಠ್, ಅರಸೀಕೆರೆ ಕ್ಷೇತ್ರದಿಂದ ಕೆಎಂ ಶಿವಲಿಂಗೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.