Ad Widget .

ಜೆಡಿಎಸ್ ನಲ್ಲೀಗ ಮೂವರು ‘ಕುಮಾರ ಸ್ವಾಮಿ’ಗಳು| ಹೇಗೆ ಗೊತ್ತಾ?

ಸಮಗ್ರ ನ್ಯೂಸ್: ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅದೇ ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿದ್ದ ನಟಿ ಸುಮಲತಾ ಅಂಬರೀಷ್ ಅವರನ್ನು ಸೋಲಿಸಲಿಕ್ಕೆ ‘ಸುಮಲತಾ’ ಎಂಬ ಹೆಸರಿನ ಏಳು ಮಂದಿಯನ್ನು ಜೆಡಿಎಸ್​ ಕಣಕ್ಕೆ ಇಳಿಸಿತ್ತು. ಹೀಗೆ ಅಂದಿನ ‘ಸಪ್ತ ಸುಮಲತಾ’ರ ಜೆಡಿಎಸ್​ ಈಗ ‘ಕುಮಾರತ್ರಯ’ರ ಪಕ್ಷ ಎಂದು ಹೇಳಲು ಅಡ್ಡಿ ಇಲ್ಲ.

Ad Widget . Ad Widget .

‘ಜೆಡಿಎಸ್​ಗೊಬ್ಬರೇ ಕುಮಾರಣ್ಣ’ ಎಂದು ಅಭಿಮಾನಿಗಳು ಹೆಮ್ಮೆಯಿಂದ ಹೇಳಬಹುದು. ಆದಾಗ್ಯೂ ಜೆಡಿಎಸ್​ನಲ್ಲಿ ಈಗ ಮೂವರು ಕುಮಾರಸ್ವಾಮಿಗಳಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಕಲೇಶಪುರ ಕ್ಷೇತ್ರದ ಎಚ್​​.ಕೆ. ಕುಮಾರಸ್ವಾಮಿ, ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ… ಇವರೇ ಆ ಮೂವರು ಕುಮಾರಸ್ವಾಮಿಗಳು.

Ad Widget . Ad Widget .

ಜೆಡಿಎಸ್​​ನ ಈ ಕುಮಾರತ್ರಯರ ಬಗ್ಗೆ ಮಾತನಾಡುವಾಗ ‘ಕುಮಾರಸ್ವಾಮಿ’ ಎಂಬುದರ ಜತೆಗೆ ಅವರ ಇನಿಷಿಯಲ್ ಇಲ್ಲವೇ ಪದನಾಮ ಬಳಸಿ ಉಲ್ಲೇಖಿಸದೇ ಹೋದರೆ ಅದು ಯಾವ ಕುಮಾರಸ್ವಾಮಿಯ ವಿಚಾರವೇ ಆಗಿದ್ದರೂ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿಯೇ ಎಂದು ಅಪಾರ್ಥಕ್ಕೆ ಈಡಾಗುವ ಸಾಧ್ಯತೆ ಇದೆ. ಏನೇ ಇರಲಿ.. ಒಂದೇ ಪಕ್ಷದಲ್ಲಿ ಹೀಗೆ ಒಂದೇ ಹೆಸರಿನ ಮೂವರು ಇರುವುದು ವಿಶೇಷ ಹಾಗೂ ಅತ್ಯಪರೂಪವೇ ಸರಿ.

Leave a Comment

Your email address will not be published. Required fields are marked *