Ad Widget .

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಎ.11 ಕೊನೆದಿನ| ಈ ದಾಖಲೆಗಳೊಂದಿಗೆ ಇಂದೇ ಬಿಎಲ್ಒ ಗಳನ್ನು ‌ಸಂಪರ್ಕಿಸಿ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಎ.11 ಕೊನೆಯ ದಿನವಾಗಿದೆ. 2004ರಲ್ಲಿ ಜನಿಸಿ, 2023ರ ಎ.1ರಂದು 18 ವರ್ಷ ತುಂಬಿದವರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಚುನಾವಣಾಧಿಕಾರಿಯ ಪ್ರಕಟನೆ ತಿಳಿಸಿದೆ.

Ad Widget . Ad Widget .

ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 46,967 ಹಿರಿಯ ನಾಗರಿಕರು ಹಾಗೂ 14,007 ಮಂದಿ ವಿಶೇಷ ಚೇತನ ಮತ ದಾರರಿದ್ದಾರೆ. ಎ.11ರ ನಂತರ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಮನೆಗಳಿಗೆ ಸೆಕ್ಟರ್ ಆಫೀಸರ್ ಹಾಗೂ ಬಿಎಲ್‌ ಒಗಳು ಭೇಟಿ ನೀಡಿ 12ಆ ಫಾರ್ಮ್ ವಿತರಿಸಿದ 5 ದಿನಗಳ ಬಳಿಕ ಪೂರ್ಣ ವಿವರವನ್ನು ತುಂಬಿಸಿ ಅರ್ಜಿಯನ್ನು ಹಿಂದಿರುಗಿಸಬೇಕು. ನಂತರ ಚುನಾವಣಾಧಿಕಾರಿಗಳು ಅದನ್ನು ದೃಢೀಕರಿಸಿ ಎಷ್ಟು ಮಂದಿ ಮನೆಯಿಂದಲೇ ಮತದಾನ ಮಾಡಲು ಇಚ್ಛಿಸಿದ್ದಾರೆ ಎಂದು ಗುರುತು ಮಾಡುತ್ತಾರೆ.

Ad Widget . Ad Widget .

ಸ್ಟೀಫ್ ಸಮಿತಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವಿಕೆ ಹೀಗೆ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಅಗತ್ಯಕ್ಕೆ ಅನುಗುಣವಾಗಿ ಮತದಾನಕ್ಕೆ ಸಂಬಂಧಿಸಿದ ಬ್ಯಾಲೆಟ್ ಪೇಪರ್ ಸಿದ್ಧಪಡಿಸಿ, ಕ್ಷೇತ್ರ ವ್ಯಾಪ್ತಿಗೆ ಅಗತ್ಯ ವಿರುವ ಅಧಿಕಾರಿಗಳ ತಂಡಗಳನ್ನು ರಚಿಸಿ ಸಕಲ ಭದ್ರತೆಯೊಂದಿಗೆ ಗೌಪ್ಯವಾಗಿ ಮನೆಯಿಂದಲೇ ಮತದಾನ ಪ್ರಕ್ರಿಯೆ ನಡೆಯುತ್ತದೆ. ಈ ಮತದಾನದ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವೀಡಿಯೊ ಚಿತ್ರೀಕರಣ ಮಾಡ ಲಾಗುತ್ತದೆ. ಮತಪತ್ರವನ್ನು ಮತಪೆಟ್ಟಿಗೆಯಲ್ಲಿ ಹಾಕಿ ಭದ್ರ ಕೊಠಡಿಯಲ್ಲಿ ಇಡಲಾಗುತ್ತದೆ. ಅಲ್ಲದೆ, ಮತ ಎಣಿಕೆಯ ದಿನ ಇದರ ಎಣಿಕೆ ನಡೆಯುತ್ತದೆ. ಮನೆಯಿಂದ ಮತದಾನ ಮಾಡುವ ವ್ಯಕ್ತಿಗೆ ಮತದಾನ ಕೇಂದ್ರದಲ್ಲಿ ಮತ ಹಾಕಲು ಅವಕಾಶ ಇರುವುದಿಲ್ಲ ಎಂದು ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

  • ನೋಂದಣಿ ವಿಧಾನ: https://ceo.Kar- nataka.gov.in/en ವೆಬ್‌ಸೈಟ್ ಅಥವಾ ಆ್ಯಪ್ ಅಥವಾ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೂಲಕವೂ ಮತದಾರರು ನೋಂದಾಯಿಸಿಕೊಳ್ಳ ಬಹುದು. ಅಲ್ಲದೆ ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಯನ್ನು ಭೇಟಿ ಮಾಡಿ(ಆಫ್‌ ಲೈನ್) ನೇರವಾಗಿ ಕೂಡ ನೋಂದಣಿ ಮಾಡಬಹುದು. ವೋಟ‌ ಹೆಲ್ತ್‌ಲೈನ್‌ ಮೊಬೈಲ್ ಆ್ಯಪ್ ನ ಉಚಿತ ಸಹಾಯ ವಾಣಿ ಸಂಖ್ಯೆ 1950ಗೆ ಕರೆ ಮಾಡಿ ಅಗತ್ಯ ಮಾಹಿತಿ ನೀಡಿ ಹೆಸರು ಸೇರಿಸಿಕೊಳ್ಳಬಹುದು.
  • ನೋಂದಣಿಗೆ ಬೇಕಾದ ಅಗತ್ಯ ದಾಖಲೆಗಳು: ಮತದಾರರ ಹೆಸರು ಸೇರ್ಪಡೆಗೊಳಿಸಲು ಜನನ ದಾಖಲೆಯಾಗಿ ಪಾಸ್‌ ಪೋರ್ಟ್ ಅಳತೆಯ ಭಾವಚಿತ್ರದ ಜೊತೆ ಜನನ ಪ್ರಮಾಣ ಪತ್ರ, ಡೈವಿಂಗ್ ಲೈಸೆನ್ಸ್‌, ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್, ಶಾಲಾ-ಕಾಲೇಜಿನಲ್ಲಿ ನೀಡಿರುವ ಜನ್ಮ ದಿನಾಂಕವನ್ನು ಹೊಂದಿರುವ ಪ್ರಮಾಣ ಪತ್ರದಲ್ಲಿ ಯಾವುದಾದರೂ ಒಂದು ದಾಖಲೆ ಮತ್ತು ವಿಳಾಸದ ದೃಢೀಕರಣ ದಾಖಲೆಗಾಗಿ ಇಂಡಿಯನ್ ಪಾಸ್‌ಪೋರ್ಟ್, ಅಂಚೆ ಕಚೇರಿ ಪಾಸ್‌ ಪುಸ್ತಕ ಅಥವಾ ವಿದ್ಯುತ್, ನೀರು, ಗ್ಯಾಸ್‌ ಬಿಲ್‌ ಪ್ರತಿಗಳನ್ನು (ಕನಿಷ್ಠ ಒಂದು ವರ್ಷದ ಪ್ರತಿ) ಯಾವುದಾದರೂ ಕನಿಷ್ಠ ಒಂದು ದಾಖಲೆಯನ್ನು ಹಾಜರುಪಡಿಸಬಹುದು.

ಹೀಗೆ ಜನನ ಮತ್ತು ವಾಸಸ್ಥಳದ ವಿಳಾಸದ ಎರಡು ದಾಖಲೆಗಳನ್ನು ಜೊತೆಗೆ ಕಲರ್ ಭಾವಚಿತ್ರ ಪ್ರತಿಯನ್ನು ನೋಂದಣಿ ಸಂದರ್ಭದಲ್ಲಿ ಒದಗಿಸಬೇಕು ಎಂದು ಪ್ರಕಟನೆ ತಿಳಿಸಿದೆ.

Leave a Comment

Your email address will not be published. Required fields are marked *