ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಸಾಂದ್ರಿಕೃತ ನೈಸರ್ಗಿಕ ಅನಿಲ (CNG) ಹಾಗೂ ಪೈಪ್ಡ್ ನೈಸರ್ಗಿಕ ಅನಿಲ (PNG) ದರ ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕದಲ್ಲೂ ಎರಡೂ ಅನಿಲಗಳ ದರ 6 ರಿಂದ 7 ರೂ. ನಷ್ಟು ಇಳಿಕೆಯಾಗಿದೆ.
ಜಿಎಐಎಲ್ ಸಿಎನ್ ಜಿ ಹಾಗೂ ಪಿಎನ್ ಜಿ ಅನಿಲ ದರ ಇಳಿಕೆ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಪಿಎನ್ ಜಿ ದರವನ್ನು 7 ರೂ.ಹಾಗೂ ಕಂಪನಿ ಕಾರ್ಯನಿರ್ವಹಿಸುವ ಇತರ ನಗರಗಳಲ್ಲಿ 6 ರೂ.ಇಳಿಕೆ ಮಾಡಿದೆ. ಸಿಎನ್ ಜಿ ದರವನ್ನು ಇಳಿಕೆ ಮಾಡಲಾಗಿದ್ದು, ಕರ್ನಾಟದಲ್ಲಿ ಪ್ರತಿ ಕೆಜಿ ಸಿಎನ್ ಜಿ ದರವನ್ನು 7 ರೂ.ಹಾಗೂ ಇತರ ಪ್ರದೇಶಗಳಲ್ಲಿ 6 ರೂ.ಗೆ ಇಳಿಕೆ ಮಾಡಿದೆ.
ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಸಿಎನ್ ಜಿ ಹಾಗೂ ಪಿಎನ್ ಜಿ ಬೆಲೆಗೆ ಸಂಬಂಧಿಸಿದಂತೆ ನೂತನ ನೀರಿ ಜಾರಿ ಮಾಡಿದ್ದು, ಇನ್ಮುಂದೆ ಮಾಸಿಕ ದರ ಪರಿಷ್ಕರಣೆಗೆ ನಿರ್ಧರಿಸಿದೆ.