ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆ ಎಂಬಲ್ಲಿ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನ ವಾಗಿಲ್ಲ, ಈ ಕಾರಣ ಗ್ರಾಮಸ್ಥರು ಜಿಲ್ಲಾಧಿಕಾರಿಯ ಸಹಾಯ ಪಡೆಯಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಅಡ್ತಲೆಯಲ್ಲಿ ಸುಮಾರು 15 ವರ್ಷಗಳ ಹಿಂದೆ ಟ್ಯಾಂಕ್ ನಿರ್ಮಾಣ ಆಗಿದ್ದು, ಇದಕ್ಕೆ ಸಾಕಷ್ಟು ನೀರು ಇರುವ ಬೋರ್ ನಿರ್ಮಾಣ ಆಗಿ ಪೈಪ್ ಲೈನ್ ಅಳವಡಿಸಿದ್ದರೂ ಯಾವುದೇ ಮನಗೆ ನೀರು ಬಂದಿರುವುದಿಲ್ಲ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಗೆ ಸಾಕಷ್ಟು ಸಲ ಮನವಿ ಮಾಡಿದರೂ ಇದುವರೆಗೂ ಒಂದೇ ಒಂದು ಮನೆಗಳಿಗೂ ಸಂಪರ್ಕ ಕಲ್ಪಿಸಲು ಸಾಧ್ಯ ಆಗಿರುವುದಿಲ್ಲ. ಅಲ್ಲದೆ ಇತ್ತೀಚಿಗೆ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಅಡಿಯಲ್ಲಿ ಅಲ್ಲಲ್ಲಿ ಹಲವಾರು ಬೋರ್ ಗಳ ಹಾಗೂ ಟ್ಯಾಂಕ್ ಗಳ ನಿರ್ಮಾಣ ಆಗಿದ್ದರೂ, ಸ್ಥಳೀಯ ಜನತೆಗೆ ಕುಡಿಯುವ ನೀರನ್ನು ಕಲ್ಪಿಸಿರುವುದಿಲ್ಲ
ಕಾಮಗಾರಿ ನಡೆದರೂ ಜನರ ಉಪಯೋಗಕ್ಕೆ, ವ್ಯವಸ್ಥೆ ಕಲ್ಪಿಸಲು ಸಂಪೂರ್ಣ ವಿಫಲ ಆಗಿರುವುದರ ಬಗ್ಗೆ ತಾವುಗಳು ಕೂಲಂಕುಶ ತನಿಖೆ ನಡೆಸಿ, ಅತೀ ಶೀಘ್ರವಾಗಿ ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸಲು ಸಂಬಂಧ ಪಟ್ಟ ಇಲಾಖೆಗೆ ನಿರ್ದೇಶಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.