ಸಮಗ್ರ ನ್ಯೂಸ್: ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆ ಗರಿಗೆದರಿದೆ. ರಾಜಕಾರಣಿಗಳು ಜನರನ್ನು ಯಾಮಾರಿಸಲು ಪ್ರಯತ್ನಪಟ್ಟರೆ, ಜನರು ಅವರಿಗೆ ಬುದ್ದಿ ಕಲಿಸಲು ಅಣಿಯಾಗ್ತಿದಾರೆ. ವಿವಿಧ ರಾಜಕೀಯ ಪಕ್ಷದ ನಾಯಕರು ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ ಜಾಣ ಮತದಾರ ಇದುವರೆಗೆ ತಿರುಗಿ ನೋಡದ ರಾಜಕಾರಣಿಗಳಿಗೆ ಪಾಠ ಕಲಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಮತದಾನ ನಮ್ಮ ಹಕ್ಕು ಸೂಕ್ತವಾಗಿ ಸ್ಪಂದಿಸದ ಜನಪ್ರತಿನಿಧಿಗಳಿಗೆ ಓಟು ಕೊಡುವುದಿಲ್ಲ ಅನ್ನುವ ಕೂಗು ಸುಳ್ಯ ತಾಲೂಕಿನ ಹಲವು ಕಡೆ ಕೇಳಿ ಬಂದಿದೆ. ಇದೀಗ ಅಜ್ಜಾವರದ ಮುಂಡೋಳಿಮೂಲೆಯಲ್ಲೂ ಇಂಥಹುದ್ದೇ ಒಂದು ಅಸಮಾಧಾನ ಕೇಳಿ ಬಂದಿದೆ. ಸುಳ್ಯ ತಾಲೂಕಿನ ಅಜ್ಜಾವರ ಮುಂಡೋಳಿ ಮೂಲೆಯ ಮನೆಯವರು ರಸ್ತೆಗೆ ಅಗತ್ಯವಾಗಿದ್ದ ಮಣ್ಣನ್ನು ತಮ್ಮ ಕೃಷಿ ಭೂಮಿಯಿಂದ ನೀಡಿರುತ್ತಾರೆ.ಆದರೆ ರಸ್ತೆಗೆ ಸುರಿಯುವ ಮಣ್ಣು ಮಳೆಗಾಲದಲ್ಲಿ ವಾಪಸ್ ಬಂದು ಮೋರಿಯಲ್ಲಿ ಸಿಕ್ಕಿ ಕೊಳ್ಳುತ್ತಿದೆ. ಇದರಿಂದ ನೀರು ಕೃಷಿ ಭೂಮಿಯಲ್ಲಿ ತುಂಬಿಕೊಳ್ಳುತ್ತಿದೆ. ಇದನ್ನು ಸರಿಪಡಿಸಿಕೊಡುವಂತೆ ಮನವಿ ಸಲ್ಲಿಸಿದರೂ ಇದುವರೆಗೆ ಸರಿಯಾಗಿಲ್ಲ. ಅಲ್ಲದೆ ಗಂಗಾ ಕಲ್ಯಾಣ ಯೋಜನೆಯಡಿ ನೀರಿನ ಸಮಸ್ಯೆ ಬಗೆ ಹರಿಸುತ್ತೇವೆಂದು ಶಾಸಕರು ಭರವಸೆ ನೀಡಿದ್ದರು. ಆದರೆ ಇದುವರೆಗೂ ನೀಡಿಲ್ಲ. ಈ ಎಲ್ಲ ಸಮಸ್ಯೆಗಳು ಬಾಕಿ ಇರುವುದರಿಂದ ನಮ್ಮ ಮನೆಯ ಕಡೆಗೆ ರಾಜಕಾರಣಿಗಳು ಬರಬೇಡಿ ಎಂದು ಮುಂಡೋಳಿಮೂಲೆ ಮನೆಯವರು ಬೋರ್ಡ್ ಅನ್ನು ತಮ್ಮ ಗೇಟಿಗೆ ನೇತು ಹಾಕಿದ್ದಾರೆ. ಈ ಮೂಲಕ ರಾಜಕಾರಣಿಗಳಿಗೆ ತಕ್ಕಪಾಠ ಕಲಿಸಲು ರೆಡಿಯಾಗಿದ್ದಾರೆ.