ಸಮಗ್ರ ನ್ಯೂಸ್: ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಗೆ (Sathyajith Surathkal) ಸರ್ಕಾರ ನೀಡಿದ್ದ ಗನ್ ಮ್ಯಾನ್ ಭದ್ರತೆಯನ್ನು ಸರ್ಕಾರ ಹಿಂಪಡೆದಿದೆ.
2000 ನೇ ಇಸವಿ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವಿರತವಾಗಿ ಕೋಮು ಗಲಾಬೆ ನಡೆಯುತಿದ್ದಾಗ ಹಿಂದೂ ಜಾಗರಣ ವೇದಿಕೆಯ ಮುಂಚೂಣಿ ಮುಖಂಡ ಸತ್ಯಜಿತ್ ಸುರತ್ಕಲ್ ಗೆ ಅಂದಿನ ಸರ್ಕಾರ ಗನ್ ಮ್ಯಾನ್ ಭದ್ರತೆಯನ್ನು ನೀಡಿತ್ತು.
ಸತ್ಯಜಿತ್ ಗೆ ಗನ್ ಮ್ಯಾನ್ ನೀಡಿದ ಕೆಲವೇ ದಿನಗಳಲ್ಲಿ 2006ರ ಡಿ.1 ರಂದು ಬಿಜೆಪಿ ಮುಖಂಡ ಮುಲ್ಕಿ ಸುಖಾನಂದ ಶೆಟ್ಟಿ ಯವರ ಬರ್ಭರ ಹತ್ಯೆ ನಡೆಯಿತು.
ಹಲವು ವರ್ಷಗಳಿಂದ ಸತ್ಯಜಿತ್ ಸುರತ್ಕಲ್ ಹಿಂದೂ ಸಂಘಟನೆಯ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡು ರಾಜ್ಯದಾದ್ಯಂತ ಪ್ರವಾಸ ಮಾಡುತಿದ್ದರು.
ಇದೀಗ 16 ವರ್ಷಗಳಿಂದ ಇದ್ದ ಗನ್ ಮ್ಯಾನ್ ಭದ್ರತೆಯನ್ನು ಜೀವ ಭಯ ಇರುವುದಿಲ್ಲ ಎಂದು ಸರ್ಕಾರ ವಾಪಸ್ ಪಡೆದಿದೆ ಎಂದು ಮಾಧ್ಯಮಕ್ಕೆ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.