ಸಮಗ್ರ ನ್ಯೂಸ್: ಚೀತಾಗಳ ಸ್ಥಳಾಂತರ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿರುವ ವನ್ಯಜೀವಿ ಪರಿಣಿತರ ಪ್ರಕಾರ ಕುನೋ ನ್ಯಾಶನಲ್ ಪಾರ್ಕ್ ನಲ್ಲಿ ಮಾರ್ಚ್ 24ರಂದು ಸಿಯಾಯ ಹೆಸರಿನ ಚೀತಾ ಜನ್ಮ ನೀಡಿದ ಮರಿಗಳಿಗೆ ಫ್ರೆಡ್ಡಿ ಹೆಸರಿನ ಗಂಡು ಚೀತಾವೇ ತಂದೆ ಅನ್ನೋದು ಹೆಚ್ಚು ಕಡಿಮೆ ಖಚಿತವಾಗಿದೆ.
ಚೀತಾಗಳ ಸ್ಥಳಾಂತರ ಪ್ರಾಜೆಕ್ಟ್ ನ ಅಂತರರಾಷ್ಟ್ರೀಯ ಸಲಹೆಗಾರರಾಗಿರುವ ಕೆರೋಲಿನಾ ಟೊರೆಸ್ ಅವರು ಡಿಸೆಂಬರ್ 26 ರಂದು ಸೆರೆಹಿಡಿದಿರುವ ವಿಡಿಯೋಗಳ ಆಧಾರದ ಮೂಲಕ ಫ್ರೆಡ್ಡಿ ಸಿಯಾಯ ಮರಿಗಳ ತಂದೆಯಾಗಿರುವ ನಂಬಿಕೆ ಬಲಗೊಳ್ಳುತ್ತಿದೆ. ಅದೇ ಅವಧಿಯಲ್ಲಿ ಫ್ರೆಡ್ಡಿ ಮತ್ತು ಸಿಯಾಯ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿರುವ ಸಾಧ್ಯತೆ ಇದೆ. ‘ಚೀತಾಗಳ ಚಟುವಟಿಕೆಗಳನ್ನು ಗಮನಿಸುತ್ತಿದ್ದರೆ, ಸಿಯಾಯ ಮತ್ತು ಅದರ ಮರಿಗಳು ಆರೋಗ್ಯವಾಗಿವೆ. ಉತ್ತಮವಾಗಿ ಆರೋಗ್ಯ ಕಾಯ್ದುಕೊಂಡಿರುವ ಮತ್ತು ಸಕ್ರಿಯವಾಗಿರುವ ಸಿಯಾಯ ಹೆರಿಗೆಯ ನಂತರ ತನ್ನ ಮರಿಗಳ ಆಹಾರಕ್ಕಾಗಿ ಎರಡು ಬಾರಿ ಬೇಟೆಯಾಡಿದೆ.
ಇದು ನಮಗೆ ನಿಜಕ್ಕೂ ಬಹಳ ಸಂತಸದ ಸಂಗತಿ,’ ಎಂದು ಮಧ್ಯಪ್ರದೇಶ ವನ್ಯಜೀವಿ ಸಂರಕ್ಷಣೆಯ ಪಿಸಿಸಿಎಫ್ ಜೆಎಸ್ ಚೌಹಾನ್ ಹೇಳುತ್ತಾರೆ. ವನ್ಯಜೀವಿ ಪರಿಣಿತರ ಪ್ರಕಾರ ನಾಲ್ಕು ನವಜಾತ ಮರಿಗಳನ್ನು ಯಾವುದೇ ಸಂದೇಹವಿಲ್ಲದೆ ಭಾರತೀಯ ಚೀತಾಗಳೆಂದು ಕರೆಯಬಹುದು. ‘ಸೆಪ್ಟೆಂಬರ್ 17ರಂದು ಚೀತಾಗಳನ್ನು ಸ್ಥಳಾಂತರಿಸಿದ ಬಳಿಕ ಭಾರತೀಯ ಚೀತಾ ಮರಿಗಳು ಭಾರತದ ನೆಲದ ಮೇಲೆ ಜನ್ಮತಳೆದಿವೆ