ಸಮಗ್ರ ನ್ಯೂಸ್: ಪತಿ, ಪತ್ನಿ ನಡುವೆ ಜಗಳ ನಡೆದು, ಪತಿ ಮೃತಪಟ್ಟ ಘಟನೆ ಧರ್ಮಸ್ಥಳ ಗ್ರಾಮದ ಕನ್ಯಾಡಿ ಹತ್ತಿರ ಗಂಗೆತ್ಯಾರ್ ಎಂಬಲ್ಲಿ ಎಂಬಲ್ಲಿ ನಡೆದಿದೆ.
ರಾಮಣ್ಣ ಗೌಡ ಮೃತಪಟ್ಟ ವ್ಯಕ್ತಿ. ಚೆನ್ನಕ್ಕ ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ನಿಯೊಂದಿಗೆ ಜಗಳವಾಡಿದ ರಾಮಣ್ಣ ಗೌಡ ಚೆನ್ನಕ್ಕನಿಗೆ ಹಲ್ಲೆ ನಡೆಸಿ ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆ. ತತ್ ಕ್ಷಣ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ವೇಳೆ ರಕ್ತದ ಒತ್ತಡ ಹೆಚ್ಚಿದ ಪತಿ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದು, ಇವರಿಗೆ ಮೂವರು ಪುತ್ರರು ಓರ್ವ ಪುತ್ರಿ ಇದ್ದಾರೆ . ಘಟನೆಯಿಂದ ಪತ್ನಿ ನೊಂದಿದ್ದು ಪ್ರಕರಣ ಹಿಂಪಡೆದಿದ್ದಾರೆ.