ಸಮಗ್ರ ನ್ಯೂಸ್: ಪಾನ್‌ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಇನ್ನು ಕೇವಲ ಮೂರು ದಿನವಷ್ಟೇ ಬಾಕಿ ಇದೆ. ಹೀಗಾಗಿ ಜನರು ಪಾನ್ ಆಧಾರ್ ಕಾರ್ಡ್ ಲಿಂಕ್ ಮಾಡುವ ಸಲುವಾಗಿ ಸೈಬರ್ ಸೆಂಡರ್ ಗಳತ್ತ ಮುಖ ಮಾಡ್ತಿದ್ದಾರೆ. ಪಾನ್ಗೆ ಆಧಾರ್ ನಂಬರ್ ಲಿಂಕ್ ಮಾಡಲೇಬೇಕು, ಲಿಂಕ್ ಮಾಡದಿದ್ರೆ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗುತ್ತೆ. ಅಮೌಂಟ್ ತೆಗೆಯೋಕಾಗಲ್ಲ. ಹೀಗೆ ನಾನಾ ರೀತಿಯ ಭಯ ಕಾಡುತ್ತಿದೆ. ಮಾರ್ಚ್ 31ರೊಳಗೆ ಆಧಾರ್ ಲಿಂಕ್ ಮಾಡಲು ಡೆಡ್ಲೈನ್ ಕೊಟ್ಟಿದ್ದು ಜನರೆಲ್ಲ ಸೈಬರ್ ಸೆಂಟರ್ಗಳತ್ತ ಮುಗಿಬಿದ್ದಿದ್ದಾರೆ. ಒಂದು ಸಾವಿರ ರೂಪಾಯಿ ಫೈನ್ ಕಟ್ಟಿ, ಪಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡ್ತಿದ್ದಾರೆ. ಆದ್ರೆ, ಇದ್ರಲ್ಲೂ ಕೂಡ ಗೋಲ್ಮಾಲ್ ನಡೀತಿದೆ.
ಮಾರ್ಚ್ 31ರೊಳಗೆ ಪಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡಿಸಲು ಜನರೆಲ್ಲ ಸೈಬರ್ ಸೆಂಟರ್ಗಳತ್ತ ಮುಖ ಮಾಡಿದ್ದಾರೆ. ಆದ್ರೆ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲ ಸೈಬರ್ ಸೆಂಟರ್ಗಳ ಮಾಲೀಕರು, ಇನ್ಕಮ್ ಟ್ಯಾಕ್ಸ್ ವೆಬ್ಸೈಟ್ ಬದಲಾಗಿ, ಬೇರೆ ಬೇರೆ ವೆಬ್ ಸೈಟ್ ಗಳಲ್ಲಿ ಪಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿ ಜನರಿಂದ ಹಣ ಹೊಡೆಯುತ್ತಿದ್ದಾರೆ. ಒಂದು ಸಾವಿರ ರೂಪಾಯಿ ದಂಡದ ಹಣವನ್ನ ಜನರು ಕಟ್ತಿದ್ದು, ಇದರ ಪ್ರೋಸೆಸಿಂಗ್ ಫೀಜ್ ಅಂತಲೇ 500 ರೂಪಾಯಿ ತನಕ ಹಣ ತೆಗೆದುಕೊಳ್ತಿದ್ದಾರೆ. ಇನ್ನು, ಪಾನ್ ಹಾಗೂ ಆಧಾರ್ ಲಿಂಕ್ ಮಾಡಿಸಲು ಬಡಜನರು ಪರದಾಡ್ತಿದ್ದಾರೆ. ಒಂದು ಸಾವಿರ ರೂಪಾಯಿ ದಂಡದ ಮೊತ್ತ ಜಾಸ್ತಿಯಾಯ್ತು ಅಂತ ಸಿಡುಕುತ್ತಿದ್ದಾರೆ. ಸೈಬರ್ ಸೆಂಟರ್ಗಳತ್ತ ಸದ್ಯ ತುಂಬಿ ತುಳುಕುತ್ತಿವೆ.
ಒಂದು ಸಾವಿರ ದಂಡ ಕಟ್ಟದೇ ಇದ್ರೆ, ಏಪ್ರಿಲ್ ಬಳಿಕ 10 ಸಾವಿರ ರೂಪಾಯಿ ದಂಡದ ಹೊರೆ ಬೀಳುವ ಸಾಧ್ಯತೆ ಇದೆ. ಹೀಗಾಗಿ, ಜನರೆಲ್ಲ ಪಾನ್ಗೆ ಆಧಾರ್ ಲಿಂಕ್ ಮಾಡಿಸಲು ಹರಸಾಹಸ ಪಡ್ತಿದ್ದಾರೆ. ಆದ್ರೆ, ಕೆಲ ಕಿಡಿಗೇಡಿಗಳು ಇದ್ರಲ್ಲೂ ತಮ್ಮ ಜೇಬು ತುಂಬಿಸಿಕೊಳ್ಳಲು ನೋಡ್ತಿದ್ದಾರೆ.