ನವದೆಹಲಿ: ಕೊರೊನಾ ವೈರಸ್ ನ ಎರಡನೆಯ ಅಲೆಯ ನಡುವೆ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರದ ವತಿಯಿಂದ ಸಿಗುವ ಸವಲತ್ತುಗಳಲ್ಲಿ ಕಡಿತ ಉಂಟಾಗುವ ಸಾಧ್ಯತೆ ಇದೆ. ಕೊರೊನಾದಿಂದಾಗಿ ಸರ್ಕಾರದ ಬೊಕ್ಕಸ ಭಾರಿ ಒತ್ತಡಕ್ಕೆ ಒಳಗಾಗಿದೆ. ಕೊರೊನಾ ಕಾರಣ ಒಂದೆಡೆ ಸರ್ಕಾರದ ವೆಚ್ಚದಲ್ಲಿ ನಿರಂತರ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಸರ್ಕಾರದ ಆದಾಯದಲ್ಲಿ ಕೊರತೆ ಎದುರಾಗಿದೆ. ಈ ಹಿನ್ನಲೆಯಲ್ಲಿ ವೆಚ್ಚದ ಕಡಿತ ಸರ್ಕಾರದ ಕಛೇರಿಗಳು ಹಾಗೂ ನೌಕರರವರೆಗೆ ತಲುಪಿದೆ. ಕೇಂದ್ರ ಸರ್ಕಾರ ತನ್ನ ಎಲ್ಲಾ ಸಚಿವಾಲಯಗಳು ಹಾಗೂ ವಿಭಾಗಗಳಿಗೆ ವೆಚ್ಚದ ಅಂಕುಶ ಹೇರಲು ಸೂಚಿಸಿದೆ. ಇದರಿಂದ ನೌಕರರ ಓವರ್ ಟೈಮ್ ಭತ್ಯೆ ಗಳಂತಹ ಹಲವು ಸಂಗತಿಗಳ ಮೇಲೆ ಪ್ರಭಾವ ಉಂಟಾಗಲಿದೆ.
ಸರ್ಕಾರದಿಂದ ಶೇ. 20 ರಷ್ಟು ಕಡಿತ ಸಾಧ್ಯತೆ
ದೇಶಾದ್ಯಂತ ಕೋವಿಡ್ -19 ಸಾಂಕ್ರಾಮಿಕದ ನಂತರ ಮೊದಲ ಬಾರಿಗೆ, ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಚಿವಾಲಯಗಳು ಓವರ್ ಟೈಮ್ ಅಲೌನ್ಸ್ ಹಾಗೂ ರಿವೈಸ್ದ್ ಅಲ್ಲೌನ್ಸ್ ಇತ್ಯಾದಿ ವೆಚ್ಚಗಳಲ್ಲಿ ಶೇ. 20ರಷ್ಟು ಕಡಿತಗೊಳಿಸಲಿವೆ. ನಾನ್-ಸ್ಕೀಮ್ದ್ ವೆಚ್ಚವನ್ನು ಶೇಕಡಾ 20 ರಷ್ಟು ಕಡಿತಗೊಳಿಸಲಾಗುತಿದ್ದು ಇದರಲ್ಲಿ ಟ್ರಾವೆಲ್ ಅಲೌನ್ಸ್ ಕೂಡಾ ಸೇರಿದೆ.
ಗುರುವಾರ ಹಣಕಾಸು ಇಲಾಖೆಯ ಖರ್ಚು ವಿಭಾಗ ಈ ಕುರಿತು ವಿಜ್ಞಪ್ತಿಯೊಂದನ್ನು ಜಾರಿಗೊಳಿಸಿದ್ದು, ಇದರಲ್ಲಿ ಅನಾವಶ್ಯಕ ಖರ್ಚುಗಳನ್ನು ತಡೆಯಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ದೇಶಾದ್ಯಂತ ಜನರಿಗೆ ಉಚಿತ ಕೊರೊನಾ ಲಸಿಕೆ ನೀಡುವುದರಿಂದ ಹಾಗೂ ದೀಪಾವಳಿಯವರೆಗೆ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವಿಕೆಯಿಂದ ಸರ್ಕಾರದ ಬೊಕ್ಕಸದ ಮೇಲೆ ಭಾರಿ ಒತ್ತಡ ಬೀಳಲಿದೆ. ಇದು ಈ ಭತ್ಯೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಆರ್ಥಿಕ ಸಚಿವಾಲಯ ಹೊರಡಿಸಿರುವ ವಿಜ್ಞಪ್ತಿ ಪ್ರಕಾರ, ಯಾವ ಸಂಗತಿಗಳ ಖರ್ಚಿನಲ್ಲಿ ಕಡಿತ ಮಾಡಲು ಸೂಚಿಸಲಾಗಿದೆಯೋ ಅವುಗಳಲ್ಲಿ ಓವರ್ ಟೈಮ್ ಭತ್ಯೆ, ದೇಶಿ ಪ್ರಯಾಣ, ವಿದೇಶ ಯಾತ್ರೆಗಳ ಮೇಲಿನ ಖರ್ಚು, ಆಫಿಸ್ ವೆಚ್ಚ, ಬಾಡಿಗೆ, ರೇಟ್ಸ ಮತ್ತು ಟ್ಯಾಕ್ಸ್, ರಾಯಲ್ಟಿ, ಆಡಳಿತ ಹಾಗೂ ಆಡಳಿತಾತ್ಮಕ ಖರ್ಚು, ಪೂರೈಕೆ ಹಾಗೂ ಸಾಮಗ್ರಿ, ಪಡಿತರ ಹೂಡಿಕೆ, POL, ಸಮವಸ್ತ್ರ ಹಾಗೂ ಟೆಂಟೆಜ್, ಜಾಹೀರಾತು ಹಾಗೂ ಪ್ರಸಾರ, ಲಘು ಕಾರ್ಯಗಳು, ಮೆಂಟೆನೆನ್ಸ್, ಸೇವಾ ಶುಲ್ಕ, ಕೊಡುಗೆ ಹಾಗೂ ಇತರೆ ಶುಲ್ಕಗಳು ಸೇರಿವೆ.