ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂಬಂಧಿಸಿ ಸುಳ್ಯದ ಗಾಂಧಿನಗರದಲ್ಲಿರುವ ಪಿಎಫ್‌ಐ ಕಚೇರಿಯನ್ನು ಜಪ್ತಿ ಮಾಡಲು ಎನ್‌ಐಎ ನೋಟಿಸ್ ಜಾರಿ ಮಾಡಿದೆ.
ಆರೋಪಿಗಳು ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಚು ಸಭೆಗಳನ್ನು ನಡೆಸಲು ಇದನ್ನು ಬಳಸುತ್ತಿದ್ದರು.ಜನರಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುವ ಉದ್ದೇಶದಿಂದ ಮತ್ತು ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಈ ಕಛೇರಿಯನ್ನು ಮಾಡಲ್ಪಟ್ಟಿದೆ, ಆ ಮೂಲಕ ಭಾರತದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ.
ಈ ಎಲ್ಲಾ ಆರೋಪದಡಿಯಲ್ಲಿ ಎನ್ಐಎ ಇನ್ಸ್‌ಪೆಕ್ಟರ್ ಷಣ್ಮುಗಂ.ಎಂ, ನೇತೃತ್ವದಲ್ಲಿ ಸುಳ್ಯದ ಗಾಂಧಿನಗರದ ಆಲೆಟ್ಟಿ ರಸ್ತೆಯ ತಾಹಿರಾ ಕಾಂಪ್ಲೆಕ್ಸ್‌ನಲ್ಲಿ ಇರುವ ಪಾಪ್ಯುಲರ್ ಫ್ರಂಟ್ ಆಫ್ ಕಚೇರಿಯನ್ನು ಜಪ್ತಿ ಮಾಡುಲು ನೋಟೀಸ್ ಜಾರಿ ಮಾಡಿದೆ.