ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ 4 ಕಡೆಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ನಾಳೆ ದಾವಣಗೆರೆಯಲ್ಲಿ ನಡೆಯಲಿದೆ.
ಮಾರ್ಚ್ 25ರಂದು ದಾವಣಗೆರೆಯಲ್ಲಿ ಬಿಜೆಪಿ ಮಹಾಸಂಗಮ ಸಮಾವೇಶ ಹಮ್ಮಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಸುಮಾರು 10 ಲಕ್ಷ ಮಂದಿ ಮಹಾಸಂಗಮ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಮಿಷನ್ 150 ಗುರಿಯೊಂದಿಗೆ ಮಾರ್ಚ್ 1 ರಂದು ಮಲೆ ಮಹಾದೇಶ್ವರ ಬೆಟ್ಟ, ಮಾರ್ಚ್ 2ರಂದು ನಂದಗಡ, ಮಾರ್ಚ್ 3ರಂದು ಬಸವಕಲ್ಯಾಣ ಮತ್ತು ಅವತಿದೇವನಹಳ್ಳಿಯಿಂದ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ಆರಂಭಿಸಲಾಗಿತ್ತು. ನಾಳೆ ದಾವಣಗೆರೆಯಲ್ಲಿ ಯಾತ್ರೆಯ ಮಹಾಸಂಗಮ ನಡೆಯಲಿದೆ. ಜಿಎಂಐಟಿ ಕಾಲೇಜಿನ ಸಮೀಪ ಸಮಾವೇಶ ನಡೆಯಲಿದ್ದು, ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.