ಸಮಗ್ರ ನ್ಯೂಸ್: ಐಟಿ ದೈತ್ಯ ಅಕ್ಸೆಂಚರ್ ಗುರುವಾರ ಸುಮಾರು 19,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಇದು ತನ್ನ ಉದ್ಯೋಗಿಗಳ ಶೇಕಡಾ 2.5ರಷ್ಟನ್ನು ಪ್ರತಿನಿಧಿಸುತ್ತದೆ. ಅರ್ಧಕ್ಕಿಂತ ಹೆಚ್ಚು ವಜಾಗಳು ತನ್ನ ಬಿಲ್ ಮಾಡಲಾಗದ ಕಾರ್ಪೊರೇಟ್ ಕಾರ್ಯಗಳಲ್ಲಿನ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಕಂಪನಿ ಘೋಷಿಸಿದೆ.
ಅಕ್ಸೆಂಚರ್ ತನ್ನ ವಾರ್ಷಿಕ ಆದಾಯ ಮತ್ತು ಲಾಭದ ಅಂದಾಜುಗಳನ್ನ ಸಹ ಕಡಿಮೆ ಮಾಡಿದೆ. ಐಟಿ ಕಂಪನಿಯು ಈಗ ತನ್ನ ವಾರ್ಷಿಕ ಆದಾಯದ ಬೆಳವಣಿಗೆಯನ್ನ ಸ್ಥಳೀಯ ಕರೆನ್ಸಿಯಲ್ಲಿ ಶೇಕಡಾ 8ರಿಂದ 10ರ ವ್ಯಾಪ್ತಿಯಲ್ಲಿ ನಿರೀಕ್ಷಿಸುತ್ತದೆ.
ಈ ಹಿಂದೆ ನಿರೀಕ್ಷಿಸಿದ ಶೇಕಡಾ 8 ರಿಂದ 11ಕ್ಕೆ ಹೋಲಿಸಿದ್ರೆ ಕಂಪನಿಯು ಪ್ರಸಕ್ತ ತ್ರೈಮಾಸಿಕ ಆದಾಯವನ್ನ 16.1 ಬಿಲಿಯನ್ ಡಾಲರ್ ಮತ್ತು 16.7 ಬಿಲಿಯನ್ ಡಾಲರ್ ವ್ಯಾಪ್ತಿಯಲ್ಲಿ ಅಂದಾಜಿಸಿದೆ.