ಸಮಗ್ರ ನ್ಯೂಸ್: ಭಾರತದ ಮಾಜಿ ನಾಯಕ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಯಾವಾಗಲೂ ತಮ್ಮ ಫಿಟ್ನೆಸ್ ಬಗ್ಗೆ ಜಾಗೃತರಾಗಿದ್ದಾರೆ. ವಿರಾಟ್ ಕೊಹ್ಲಿ ಮೊಸರು, ಹಾಲಿನ ಉತ್ಪನ್ನಗಳು ಅಥವಾ ಗೋಧಿ ಹಿಟ್ಟಿನ ಚಪಾತಿಗಳನ್ನು ತಿನ್ನುವುದಿಲ್ಲವಂತೆ.
ವಿರಾಟ್ ತನ್ನ ಆಹಾರದಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದಿಲ್ಲ. ಇದು ದೇಹವನ್ನು ಕೊಬ್ಬನ್ನು ಮುಕ್ತಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ವಿರಾಟ್ ಕೊಹ್ಲಿ ವಿವಿಧ ಪದಾರ್ಥಗಳ ಹಿಟ್ಟಿನ ಬ್ರೆಡ್ ಮಾತ್ರ ತಿನ್ನುತ್ತಾರೆ.
ಸಾಮಾನ್ಯ ಅನ್ನದ ಬದಲು ಸ್ಪೇಷಲ್ ಅನ್ನ ತಿನ್ನುತ್ತಾರೆ. ಈ ಅಕ್ಕಿಯನ್ನು ಆಹಾರ ಸಂಸ್ಕರಣಾ ಘಟಕದಲ್ಲಿ ವಿಶೇಷ ರೀತಿಯಲ್ಲಿ ತಯಾರಿಸಲಾಗುತ್ತದೆ. ಗ್ಲುಟನ್ ಮುಕ್ತ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಕಡಿಮೆ ಇರುವ ಈ ಅಕ್ಕಿ ಸಾಮಾನ್ಯ ರುಚಿಯನ್ನು ಸಹ ಹೊಂದಿದೆ. ಈ ಅಕ್ಕಿಯ ಬೆಲೆ ಕೆಜಿಗೆ 400 ರಿಂದ 500 ರೂ. ಇದೆಯಂತೆ!!
ಫಿಟ್‌ನೆಸ್‌ಗಾಗಿ ಹಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು ಎಂದು ಸಂದರ್ಶನವೊಂದರಲ್ಲಿ ವಿರಾಟ್ ಹೇಳಿದ್ದರು. ನಾನು ಡೈರಿ ಉತ್ಪನ್ನಗಳನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಅಲ್ಲದೆ ಗೋಧಿಯಿಂದ ಮಾಡಿದ ಬ್ರೆಡ್ ತಿನ್ನುವುದಿಲ್ಲ ಎಂದು ಹೇಳಿದ್ದಾರೆ.
ತಾನು ಹೆಚ್ಚಿನ ಸಿಹಿಯನ್ನು ತಿನ್ನುವುದನ್ನು ನಿಲ್ಲಿಸಿದ್ದೇನೆ. ಇದರಿಂದಾಗಿ ಹೆಚ್ಚು ಫಿಟ್ ಆಗಿರಲು ಸಹಾಯಕವಾಗಿದೆ ಎಂದು ತಮ್ಮ ಫಿಟ್ನೆಸ್ ಕುರಿತು ಮಾಹಿತಿ ನೀಡಿದ್ದಾರೆ. 34ನೇ ವಯಸ್ಸಿನಲ್ಲಿಯೂ ಕೊಹ್ಲಿ ಸಖತ್ ಫಿಟ್ ಆಂಡ್ ಫೈನ್ ಆಗಿದ್ದಾರೆ.
ನಾನು ಏನು ತಿನ್ನಬೇಕೆಂದು ನನಗೆ ಚೆನ್ನಾಗಿ ತಿಳಿದಿದೆ. ನಾನು ಇರುವ ವಯಸ್ಸಿನಲ್ಲಿ ಡಯಟ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ತಂಡಕ್ಕೆ 100 ಪ್ರತಿಶತ ಕೊಡುಗೆ ನೀಡಲು ನನಗೆ ಸಹಾಯ ಮಾಡುತ್ತದೆ’ ಎಂದು ಹೇಳಿದ್ದರು.
ಇನ್ನು, ಕೊಹ್ಲಿಗೆ ಚೋಲೆ ಬಟುರೆ ಅಂದರೆ ತುಂಬಾ ಇಷ್ಟವಂತೆ. ಆದರೆ ತಮ್ಮ ಆಟದ ಮೇಳೆ ಮತ್ತು ತಮ್ಮ ಫಿಟ್ನೆಸ್ ಮೇಲೆ ಹೆಚ್ಚು ಗಮನ ಹರಿಸುವ ಕೊಹ್ಲಿ ಚೋಲೆ ಬಟುರೆಯನ್ನೂ ಸಹ ಸೇವಿಸುವುದನ್ನು ಕಡಿಮೆ ಮಾಡಿದ್ದಾರಂತೆ.
ಅಲ್ಲದೇ, ಬೆಳಗಿನ ಉಪಾಹಾರದ ಕುರಿತು ಮಾತನಾಡಿದ ಕೊಹ್ಲಿ, ಮೂರು ಮೊಟ್ಟೆಯ ಬಿಳಿಭಾಗ ಮತ್ತು ಒಂದು ಸಂಪೂರ್ಣ ಮೊಟ್ಟೆಯನ್ನು ಒಳಗೊಂಡಿರುವ ಆಮ್ಲೆಟ್‌ನಿಂದ ತನ್ನ ದಿನವು ಪ್ರಾರಂಭವಾಗುತ್ತದೆ. ಜೊತೆಗೆ ಬೇಯಿಸಿದ ಚಿಕನ್, ಹಿಸುಕಿದ ಆಲೂಗಡ್ಡೆ, ಪಾಲಕ ಮತ್ತು ತರಕಾರಿಗಳನ್ನು ತಮ್ಮ ಊಟದಲ್ಲಿ ಸೇವಿಸುತ್ತಾರಂತೆ.