ಸಮಗ್ರ ನ್ಯೂಸ್ : ಅಮ್ಮನಿಗೆ ಹಾವು ಕಡಿದ ವೇಳೆ ಆಕೆಯ ಜೀವ ಉಳಿಸಲು ಆಕೆ ಮಗಳೊಬ್ಬಳು ಸಾಹಸ ಮೆರೆದ ಘಟನೆಯೊಂದು ಪುತ್ತೂರು ತಾಲೂಕಿನ ಮಾಡಾವು ಎಂಬಲ್ಲಿಂದ ವರದಿಯಾಗಿದೆ.
ಮಾಡಾವಿನ ಶ್ರಮ್ಯ ರೈ ಎಂಬ ಯುವತಿಯೊಬ್ಬಳು ತನ್ನ ಅಮ್ಮನಿಗೆ ಹಾವು ಕಡಿದ ವೇಳೆ ಧೈರ್ಯ ತುಂಬಿ ಬಾಯಿಂದ ಕಚ್ಚಿ ವಿಷ ತೆಗೆದು ಅಮ್ಮನ ಜೀವವನ್ನು ಕಾಪಾಡಿದ್ದಾಳೆ. ಇದು ಕರಾವಳಿಯಲ್ಲಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೆಯ್ಯೂರು ಗ್ರಾಮ ಪಂಚಾಯತ್ ಸಮಸ್ಯೆ ಮಮತಾ ರೈ ಎಂಬವರು ತಮ್ಮ ಅಡಿಕೆ ತೋಟದಲ್ಲಿ ಕೆಲಸ ಮಾಡಿಸುತ್ತಿದ್ದ ವೇಲೆ ಆಕಸ್ಮಿಕವಾಘಿ ನಾಗರ ಹಾವೊಂದು ಕಡಿದಿದೆ. ಅಮ್ಮನ ಅಳುತ್ತಿದ್ದ ಶಬ್ಧ ಕೇಳಿ ಓಡೋಡಿ ಹೋಗಿ ಮಗಳು ಶ್ರಮ್ಯ ಧೈರ್ಯ ತುಂಬಿ ಕೊಂಚವೂ ಭಯಪಡದೆ ಹಾವು ಕಚ್ಚಿದ ದೇಹದ ಭಾಗದಿಂದ ಬಾಯಿಯಿಂದ ಕಚ್ಚಿ ವಿಷವನ್ನು ತೆಗೆದು ಪ್ರಥಮ ಚಿಕಿತ್ಸೆ ನೀಡಿ ತಾಯಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಬಳಿಕ ಸ್ಥಳೀಯ ಆಸ್ಪತ್ರೆ ತಾಯಿಯನ್ನು ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಯಿತು. ಇದೀಗ ಕೊಂಚ ಮಮತಾ ರೈ ಚೇತರಿಸಿಕೊಂಡಿದ್ದಾರೆ. ಈಕೆ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ರೋವರ್ಸ್ ಆಂಡ್ ರೇಂಜರ್ ವಿದ್ಯಾರ್ಥಿನಿಯೂ ಆಗಿದ್ದರು ಅಲ್ಲಿ ಕಲಿತ ಪ್ರಥಮ ಚಿಕಿತ್ಸಾ ವಿಧಾನವನ್ನು ಬಳಸಿಕೊಂಡು ತಾಯಿಯ ಪ್ರಾಣವನ್ನು ರಕ್ಷಿಸಿದ್ದಾರೆ.