ಸಮಗ್ರ ನ್ಯೂಸ್: ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರೋದು ಧೈರ್ಯ, ಸ್ಪೂರ್ತಿ ತುಂಬುವ ಮಾತು. ಈ ಕೆಲಸವನ್ನು ಬಿಇಒ ಒಬ್ಬರು ಮಾಡಿದ್ದು, ಆ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೇ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಓದಿದ್ರೇ ಖಂಡಿತವಾಗಿಯೂ ನಿಮಗೂ ಸ್ಪೂರ್ತಿಯಾಗಲಿದೆ. ಆ ಬಗ್ಗೆ ಮುಂದೆ ಓದಿ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ ನಾರಾಯಣ ಅವರು, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಬಗ್ಗೆ ತೋರಿರುವ ಪ್ರೀತಿ ಎಲ್ಲರೂ ಮೆಚ್ಚುವಂತಿದೆ. ಅಲ್ಲದೇ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದಂತೆ ಇದೆ. ತಮ್ಮ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮದೇ ಹೆಸರು ಹಾಕಿಕೊಂಡು ಓದುವಂತೆ ಬರೆದಿರುವಂತೆ ಇರುವ ಪತ್ರ ಮಾತ್ರ, ನಿಜಕ್ಕೂ ಮಕ್ಕಳ ನಾಡಿ ಮಿಡಿತ, ಪೋಷಕರಿಗೆ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.
ಅವರು ಮಕ್ಕಳಿಗಾಗಿ ಬರೆದ ಪತ್ರದಲ್ಲಿ ಪರೀಕ್ಷಾ ಸಿದ್ಧತೆ, ಏಕಾಗ್ರತೆ, ಮುಂಜಾಗ್ರತಾ ಕ್ರಮಗಳು, ಪರೀಕ್ಷಾ ಕೊಠಡಿಯಲ್ಲಿ ಮಕ್ಕಳು ಹೇಗಿರಬೇಕು. ಪರೀಕ್ಷೆ ಆರಂಭದ ನಂತ್ರ ಪ್ರಶ್ನೆ ಪತ್ರಿಕೆ ಪಡೆದುಕೊಂಡು ಹೇಗೆ ಓದಬೇಕು. ಅದಕ್ಕೆ ಯಾವ ರೀತಿಯಲಾಲಿ ಅರ್ಥೈಸಿಕೊಂಡು ಉತ್ತರಿಸಬೇಕು. ಪ್ರತಿ ವಿಷಯದ ಪರೀಕ್ಷೆಯ ನಂತ್ರ ಮುಂದಿನ ವಿಷಯದ ಪರೀಕ್ಷೆಗೆ ತಯಾರಿ ಹೇಗೆ ನಡೆಸಬೇಕು ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಮಕ್ಕಳಿಗೆ ಅರ್ಥೈಸಿ ಹೇಳಿದ್ದಾರೆ.