Ad Widget .

ತಂಗಿಯೇ ಆತನ ಹೆಂಡತಿ| ಆರು ವರ್ಷಗಳ ಬಳಿಕ ಗೊತ್ತಾಯ್ತು ವಿಚಿತ್ರ ಸತ್ಯ

ಸಮಗ್ರ ನ್ಯೂಸ್: ಮದುವೆಯಾದ 6 ವರ್ಷಗಳ ನಂತರ ಆ ವ್ಯಕ್ತಿಗೆ ವಿಚಿತ್ರ ಸತ್ಯವೊಂದು ತಿಳಿದು ಆಘಾತಕ್ಕೊಳಗಾಗಿದ್ದಾನೆ. 2 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿ 6 ವರ್ಷ ಸಂಸಾರ ನಡೆಸಿದ ಹೆಂಡತಿ ಆತನ ಸ್ವಂತ ಸಹೋದರಿ ಎಂದು ಗೊತ್ತಾಗಿ ಮುಂದೇನು ಎಂಬ ಸಂಕಷ್ಟಕ್ಕೆ ಸಿಲುಕಿದ ಘಟನೆ ಬೆಳಕಿಗೆ ಬಂದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಏನಿದು ಘಟನೆ?
ಡಿಎನ್‌ಎ ಮತ್ತು ರಕ್ತ ಹೊಂದಾಣಿಕೆಯ ಸಂಬಂಧಗಳಲ್ಲಿ ವಿವಾಹವಾಗುವುದರಿಂದ ಮುಂಬರುವ ಪೀಳಿಗೆಯಲ್ಲಿ ಆನುವಂಶಿಕ ದೋಷಗಳ ಅಪಾಯವಿದೆ ಎಂದು ವೈದ್ಯಕೀಯ ವಿಜ್ಞಾನವು ನಂಬುತ್ತದೆ.

Ad Widget . Ad Widget . Ad Widget .

ಮದುವೆಗೆ ಸಂಬಂಧಿಸಿದಂತೆ ಪ್ರಪಂಚದ ಎಲ್ಲೆಡೆ ವಿಭಿನ್ನ ಸಂಪ್ರದಾಯಗಳಿವೆ. ಆದರೆ, ಬಹುತೇಕ ಕಡೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ವಿಷಯವೆಂದರೆ ಪತಿ-ಪತ್ನಿಯರ ನಡುವೆ ರಕ್ತ ಸಂಬಂಧವೇ ಇರುವುದಿಲ್ಲ. ನಮ್ಮ ದೇಶದಲ್ಲಿ ಧರ್ಮ- ಜಾತಿ-‌ಗೋತ್ರಗಳಿಂದ ಅನೇಕ ವಿಭಿನ್ನ ವಿಷಯಗಳನ್ನು ನೋಡಲಾಗುತ್ತದೆ. ನಂತರ, ಇಬ್ಬರು ಮದುವೆಯಾಗುತ್ತಾರೆ.

ಆದರೆ, ಇತರ ಸ್ಥಳಗಳಲ್ಲಿ ಪತಿ-ಪತ್ನಿಯ ನಡುವೆ ಸಂಬಂಧ ಚೆನ್ನಾಗಿರಬೇಕು, ರಕ್ತ ಸಂಬಂಧದ ಅಗತ್ಯವಿಲ್ಲ ಎಂದು ಯೋಚಿಸಿ ಇಷ್ಟ ಆದವರನ್ನು ಮದುವೆಯಾಗುತ್ತಾರೆ. ಆದ್ರೆ, ಇದರಿಂದ ಮುಂದಾಗುವ ಅಪಾಯ ಎಷ್ಟು ಎಂಬುದಕ್ಕೆ ಇಲ್ಲೊ ನಡೆದಿರುವ ಘಟನೆಯೇ ಸಾಕ್ಷಿ.

ಮದುವೆಯಾದ 6 ವರ್ಷಗಳ ನಂತರ ಅವನು ತನ್ನನ್ನು ಮದುವೆಯಾದ ಹುಡುಗಿ ತನ್ನ ಸ್ವಂತ ಸಹೋದರಿ ಎಂದು ತಿಳಿದುಕೊಂಡಿದ್ದಾನೆ. ವರದಿಯ ಪ್ರಕಾರ, ಈ ವಿಷಯವನ್ನು ಸ್ವತಃ ವ್ಯಕ್ತಿಯೇ ಸಾಮಾಜಿಕ ಮಾಧ್ಯಮದಲ್ಲಿ ಜನರೊಂದಿಗೆ ಹಂಚಿಕೊಂಡಿದ್ದಾರೆ. ಈ ವ್ಯಕ್ತಿ ಹುಟ್ಟಿದ ಕೂಡಲೇ ಬೇರೊಬ್ಬರು ದತ್ತು ಪಡೆದರು. ಅಂತಹ ಪರಿಸ್ಥಿತಿಯಲ್ಲಿ, ಅವನಿಗೆ ತನ್ನ ಜೈವಿಕ ಪೋಷಕರ ಬಗ್ಗೆ ಏನೂ ತಿಳಿದಿರಲಿಲ್ಲ. ಬೆಳೆದು ತನ್ನ ಸ್ವಂತ ನಗರದಲ್ಲಿ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದನು ಮತ್ತು ಅವರಿಬ್ಬರೂ 2 ವರ್ಷಗಳ ಡೇಟಿಂಗ್ ನಂತರ ಮದುವೆಯಾದರು. ಅವನಿಗೂ ಇಬ್ಬರು ಮಕ್ಕಳಿದ್ದರು. ಆದರೆ, ಮಕ್ಕಳು ಹುಟ್ಟಿದ ನಂತರ ಹೆಂಡತಿ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದಳು.

ವೈದ್ಯರ ಬಳಿ ಹೋದಾಗ ಆಕೆಗೆ ಕಿಡ್ನಿ ಸಮಸ್ಯೆ ಇದ್ದು, ಆಕೆಗೆ ಕಿಡ್ನಿ ಕಸಿ ಮಾಡಬೇಕಿತ್ತು. ಅವರ ಕುಟುಂಬ ಸದಸ್ಯರುಗಳನ್ನು ಪರೀಕ್ಷೆ ಮಾಡಿದರು. ಆದರೆ, ಯಾರ ಕಿಡ್ನಿಯೂ ಹೊಂದಾಣಿಕೆ ಆಗುತ್ತಿರಲಿಲ್ಲ. ಆದರೆ, ಪತಿ ಪರೀಕ್ಷೆ ಮಾಡಿಸಿಕೊಂಡಾಗ, ಅದು ಹೊಂದಾಣಿಕೆ ಮಾತ್ರವಲ್ಲ, ಪಾಸಿಟಿವಿಟಿ ಪ್ರಮಾಣವು ತುಂಬಾ ಹೆಚ್ಚಾಗಿತ್ತು. ಇದರಿಂದ ವೈದ್ಯರೂ ಆಶ್ಚರ್ಯಚಕಿತರಾದರು. ಸಾಮಾನ್ಯವಾಗಿ ಪೋಷಕರೊಂದಿಗೆ ಮಕ್ಕಳ ಹೊಂದಾಣಿಕೆ ದರವು ಶೇಕಡಾ 50 ರಷ್ಟಿರುತ್ತದೆ. ಆದರೆ, ಒಡಹುಟ್ಟಿದವರಲ್ಲಿ ಈ ದರವು ಶೇಕಡಾ 100 ರಷ್ಟಿದೆ ಎಂದು ಅವರು ವ್ಯಕ್ತಿಗೆ ತಿಳಿಸಿದರು. ಗಂಡ ಮತ್ತು ಹೆಂಡತಿಯ ನಡುವೆ ಇದು ಎಂದಿಗೂ ಸಂಭವಿಸುವುದಿಲ್ಲ. ಕೇವಲ ಸಹೋದರ ಮತ್ತು ಸಹೋದರಿ ಮಾತ್ರ ಅಂತಹ ಹೆಚ್ಚಿನ ದರದೊಂದಿಗೆ ಹೊಂದಾಣಿಕೆಯಾಗಬಹುದು ಎಂದರು. ಇದನ್ನು ಕೇಳಿದ ವ್ಯಕ್ತಿ ಆಘಾತಕ್ಕೊಳಗಾದ.

ವ್ಯಕ್ತಿಯು ವೈವಾಹಿಕ ಜೀವನಕ್ಕೆ ಕಾಲಿಟ್ಟು 6 ವರ್ಷಗಳು ಕಳೆದಿವೆ ಮತ್ತು ಅವರು 2 ಮಕ್ಕಳೊಂದಿಗೆ ಸಂತೋಷದಿಂದಿರುವುದಾಗಿ ಹೇಳಿಕೊಂಡಿದ್ದಾನೆ.

ನೀವು ಸಂತೋಷವಾಗಿದ್ದರೆ, ಅದುವೇ ಮುಖ್ಯವಲ್ಲವೇ. ನಿಮ್ಮ ಪತ್ನಿಗೆ ಮೂತ್ರಪಿಂಡವನ್ನು ದಾನ ಮಾಡಿ ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಪೋಷಕರಾಗಿ ಮುಂದುವರಿಯಿರಿ.’ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ‘ಆಗಿ ಹೋಗಿರುವುದಕ್ಕೆ ಚಿಂತಿಸಿ ಪ್ರಯೋಜನವಿಲ್ಲ. ಇಷ್ಟು ದಿನ ಎಲ್ಲವೂ ಅದ್ಭುತವಾಗಿದೆ, ಅದನ್ನು ಬದಲಾಯಿಸುವುದರಲ್ಲಿ ಅರ್ಥವಿಲ್ಲ’ ಎಂದಿದ್ದಾರೆ.

Leave a Comment

Your email address will not be published. Required fields are marked *