ಸಮಗ್ರ ನ್ಯೂಸ್: ಮೂಡಿಗೆರೆ ಹ್ಯಾಂಡ್‍ಪೋಸ್ಟ್‍ನಿಂದ ಕೊಟ್ಟಿಗೆಹಾರದವರೆಗೆ ನೂತನವಾಗಿ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿಯು ವರ್ಷದೊಳಗೆ ಗುಂಡಿ ಬಿದ್ದಿದ್ದು ಅಪಘಾತವನ್ನು ಆಹ್ವಾನಿಸುವಂತಿದೆ.
ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾದು ಹೋಗಿರುವ ಮೂಡಿಗೆರೆ ಹ್ಯಾಂಡ್‍ಪೋಸ್ಟ್ ನಿಂದ ಕೊಟ್ಟಿಗೆಹಾರದವರೆಗೆ ಸುಮಾರು 13 ಕಿ.ಮಿ ನೂತನ ರಸ್ತೆ ನಿರ್ಮಾಣವಾಗಿದ್ದು ಚಕ್ಕಮಕ್ಕಿ, ಹೆಬ್ಬರಿಗೆ, ಬಗ್ಗಸಗೋಡು, ಸಬ್ಬೇನಹಳ್ಳಿ, ಹೊರಟ್ಟಿ, ಬಿದರಹಳ್ಳಿಯಲ್ಲಿ ಅಲ್ಲಲ್ಲಿ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿದೆ. ಹೆದ್ದಾರಿಯ ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನಗಳು ಅಪಘಾತಕ್ಕೀಡಾಗುವ ಸಂಭವವಿದ್ದು ಹೆದ್ದಾರಿ ಪ್ರಾಧಿಕಾರ ರಸ್ತೆಯ ಗುಂಡಿಗಳನ್ನು ಮುಚ್ಚಲು ಮುಂದಾಗುವ ಅಗತ್ಯವಿದೆ. ಹೆದ್ದಾರಿ ನಿರ್ಮಾಣವಾಗಿ ವರ್ಷ ಕಳೆಯುವುದರೊಳಗೆ ಗುಂಡಿ ಬಿದ್ದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಯಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಿರಿಯ ಅಭಿಯಂತರರಾದ ಚಿಂತಾಮಣಿ ಕಾಂಬ್ಲೆ, ಈ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ವಾರದೊಳಗೆ ಹೆದ್ದಾರಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.