ಸಮಗ್ರ ಸಿನಿಮಾ: ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಅವರ ಜೊತೆಗೂಡಿ ನಟ ದಿವಂಗತ ಪುನೀತ್ ರಾಜ್‌ಕುಮಾರ್ ತಯಾರಿಸಿದ್ದ ಡಾಕ್ಯೂಫಿಲಂ ‘ಗಂಧದಗುಡಿ’ ಒಟಿಟಿ ರಿಲೀಸ್‌ಗೆ ಸಜ್ಜಾಗಿದೆ.
ಪ್ರೈಂ ವಿಡಿಯೊದಲ್ಲಿ ಪುನೀತ್ ಅವರ ಜನ್ಮದಿನವಾದ ಮಾರ್ಚ್ 17 ರಂದು ಈ ಡಾಕ್ಯೂಫಿಲಂ ಸ್ಟ್ರೀಮ್ ಆಗಲಿದೆ. ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಈ ಡಾಕ್ಯೂಫಿಲಂ ನಿರ್ಮಾಣ ಮಾಡಿದ್ದು, ಮಡ್‌ಸ್ಕಿಪ್ಪರ್ ಸಹಭಾಗಿತ್ವ ಇದಕ್ಕಿದೆ.
ಬಿ. ಅಜನೀಶ್ ಲೋಕನಾಥ್ ಸಂಗೀತ ಈ ಸಿನಿಮಾಗಿದೆ. ಕಳೆದ ಅಕ್ಟೋಬರ್ 28ರಂದು ರಾಜ್ಯದಾದ್ಯಂತ 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ‘ಗಂಧದಗುಡಿ’ ಪುನೀತ್ ಅವರ ನಿಸರ್ಗ ಪ್ರೀತಿಯನ್ನು ವೀಕ್ಷಕರ ಎದುರಿಗೆ ಇಟ್ಟಿತ್ತು. ಸಾವಿರಾರು ವಿದ್ಯಾರ್ಥಿಗಳೂ ಚಿತ್ರಮಂದಿರಗಳಲ್ಲಿ ಪುನೀತ್ ಅವರನ್ನು ನೋಡಿ ಸಂಭ್ರಮಿಸಿದ್ದರು. ಪುನೀತ್ ಅವರು ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡ ಕೊನೆಯ ಚಿತ್ರ ಇದಾಗಿದ್ದ ಕಾರಣ, ಡಾಕ್ಯೂಫಿಲಂ ಬಿಡುಗಡೆಯನ್ನು ಅಭಿಮಾನಿಗಳೂ ಹಬ್ಬದಂತೆಯೇ ಆಚರಿಸಿದ್ದರು.