ಸಮಗ್ರ ನ್ಯೂಸ್: ಬಿಸಿಲಿನಿಂದ ತತ್ತರಿಸಿದ್ದ ಮಲೆನಾಡಿಗೆ ತಂಪೆರೆದ ವರುಣದೇವ ಕಳಸ ತಾಲೂಕಿನ ಹೊರನಾಡು ಸುತ್ತಮುತ್ತ ಮಧ್ಯಾಹ್ನದ ನಂತರ ಮಳೆಯಾಗಿದೆ.
ಬಲಿಗೆ, ಹೊರನಾಡು, ಕಳಸ, ಹೊನ್ನೆ ಕಾಡು ಮುನ್ನುರ್ ಪಾಲ್, ಹಳುವಳ್ಳಿಯಲ್ಲಿ ಮಳೆಯಾಗಿದ್ದು ಮಲೆನಾಡಿಗರಲ್ಲಿ ಸಂತಸ ತುಂಬಿದೆ.
ನಾಳೆ ಮಳೆಗಾಗಿ ಕಳಸೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗೆ ಮುಂದಾಗಿದ್ದರು ಆದರೆ ಪೂಜೆಗೂ ಮುನ್ನ ವರ್ಷದ ಮೊದಲ ವರುಣ ಸಿಂಚನವಾಗಿದೆ.