Ad Widget .

ಪುರುಷ ಖೈದಿಗಳೊಂದಿಗೆ ಲೈಂಗಿಕ ಸಂಬಂಧ| 13 ಮಹಿಳಾ ಗಾರ್ಡ್ ಗಳು ಕೆಲಸದಿಂದ ವಜಾ

ಸಮಗ್ರ ನ್ಯೂಸ್: ಜೈಲಿನಲ್ಲಿ ಪುರುಷ ಕೈದಿಗಳೊಂದಿಗೆ ದೈಹಿಕ ಸಂಬಂಧ ಹಾಗೂ ಅವರಿಗೆ ಸಹಾಯ ಸೌಲಭ್ಯ ನೀಡಲು ನೆರವಾದ 18 ಮಹಿಳಾ ಗಾರ್ಡ್‌ಗಳನ್ನು ಕೆಲಸದಿಂದ ವಜಾ ಮಾಡಲಾದ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.

Ad Widget . Ad Widget .

ಇಲ್ಲಿನ ನಾರ್ತ್‌ ವೇಲ್ಸ್‌ನ ರೆಕ್ಸ್‌ಹ್ಯಾಮ್‌ನ ಎಚ್‌ಎಂಪಿ ಬರ್ವಿನ್‌ನ ಜೈಲಿನಲ್ಲಿ 18 ಮಹಿಳಾ ಗಾರ್ಡ್‌ಗಳು ಅನೇಕ ಪುರುಷ ಕೈದಿಗಳೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು. ಅಲ್ಲದೇ ಪರಸ್ಪರ ವಾಟ್ಸಪ್‌ನಲ್ಲಿ ನಗ್ನಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

Ad Widget . Ad Widget .

ಈ ಮಹಿಳಾ ಗಾರ್ಡ್‌ಗಳು ಕಳೆದ ಆರು ವರ್ಷದಿಂದ ಈ ರೀತಿಯ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆಂದು ಆರೋಪಿಸಲಾಗಿದೆ.

ಜೈಲಾಧಿಕಾರಿಗಳ ಅಸೋಸಿಯೇಷನ್‌ನ ಅಧ್ಯಕ್ಷ ಮಾರ್ಕ್ ಫೇರ್‌ಹರ್ಸ್ಟ್ ಅವರು ‘ಸರಿಯಾದ ಮಹಿಳೆಯರನ್ನು ಗಾರ್ಡ್‌ಗಳಾಗಿ ನೇಮಿಸಿಕೊಳ್ಳಲಾಗಿಲ್ಲ’ ಎಂದು ಆರೋಪಿಸಿದ್ದಾರೆ.

ನೇಮಕಾತಿಯಾಗುತ್ತಿರುವ ಸಿಬ್ಬಂದಿಗೆ ಮುಖಾಮುಖಿ ಸಂದರ್ಶನಗಳಿಲ್ಲ. ಎಲ್ಲವನ್ನೂ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2019 ರಿಂದ, ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಸುಮಾರು 31 ಮಹಿಳಾ ಜೈಲು ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಅನುಚಿತ ಸಂಬಂಧಗಳಿಗಾಗಿ ವಜಾಗೊಳಿಸಲಾಗಿದೆ ಎಂದು ಕಾನೂನು ಸಚಿವಾಲಯದ ಅಂಕಿ-ಅಂಶಗಳು ಹೇಳುತ್ತವೆ. ಇದರಲ್ಲಿ ಒಬ್ಬ ಮಹಿಳಾ ಜೈಲು ಅಧಿಕಾರಿ ಕೈದಿಯಿಂದಲೇ ಗರ್ಭಿಣಿಯಾಗಿ ಮಗು ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

Leave a Comment

Your email address will not be published. Required fields are marked *