ಸಮಗ್ರ ನ್ಯೂಸ್: ದ.ಕ ಜಿಲ್ಲಾ ಇಂಟಕ್ ಕಟ್ಟಿ ಬೆಳೆಸುವಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಅವರ ಜತೆ ಪ್ರಮುಖ ಪಾತ್ರ ವಹಿಸಿದ ಮನೋಹರ್ ಶೆಟ್ಟಿ ಅವರು
ಜಿಲ್ಲಾ ಇಂಟಕ್ ಸಾರಥ್ಯವನ್ನು ವಹಿಕೊಂಡಿದ್ದಾರೆ.
ಕಳೆದ ಒಂದೆರಡು ವಾರಗಳಲ್ಲಿ ನಡೆದ ಗೊಂದಲದ ಬೆಳವಣಿಗೆಯಿಂದ ತಾತ್ಕಾಲಿಕ ಸಮಿತಿಯು ಇಂಟಕ್
ಮುಖಂಡರೊಡನೆ ಚರ್ಚಿಸದೆ ಏಕಾಏಕಿ ಬದಲಾವಣೆ ಮಾಡಿತ್ತು.
ಆದರೆ ರಾಕೇಶ್ ಮಲ್ಲಿ ಅವರ ತೀವ್ರ ವಿರೋಧ ಎಚ್ಚರಿಕೆಯ ಬಳಿಕ ರಾಜ್ಯ ಇಂಟಕ್ ಹಂಗಾಮಿ ಅಧ್ಯಕ್ಷ
ಡಿ.ಲಕ್ಷ್ಮೀ ವೆಂಕಟೇಶ್ ನೇಮಕ ಆದೇಶ ನೀಡಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ಸಂಜೀವರೆಡ್ಡಿ , ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಅನುಮೋದನೆ ನೀಡಿದ್ದು, ನೂತನ ನಿರ್ಧಾರ ದಿಂದ ಜಿಲ್ಲಾ ಇಂಟಕ್ ಪ್ರಮುಖರು, ಕಾರ್ಯಕರ್ತರು.ಹಾಗೂ ಇಂಟಕ್ ನ ವಿವಿಧ ಸಹ ಯೂನಿಯನ್ ಸಂಘಟನೆಯಲ್ಲಿ ಹರ್ಷ ವ್ಯಕ್ತವಾಗಿದೆ.
ರಾಜ್ಯ ಇಂಟಕ್ ನಿರ್ಧಾರ ವನ್ನು ರಾಜ್ಯ ಕಾರ್ಯಾಧ್ಯಕ್ಷರೂ ಆಗಿರುವ ರಾಕೇಶ್ ಮಲ್ಲಿ ಅವರು ಸ್ವಾಗತಿಸಿದ್ದು, ಮನೋಹರ್ ಶೆಟ್ಟಿ ಅವರನ್ನು ಅಭಿನಂದಿಸಿದ್ದಾರೆ. ಹಾಗೂ ಮತ್ತೆ ಇಂಟಕ್ ಬಲಿಷ್ಟವಾಗಿ ಜಿಲ್ಲೆಯಲ್ಲಿ ಬೆಳೆಯಲಿ ಎಂದು ಹಾರೈಸಿದ್ದಾರೆ.