Ad Widget .

ಲಕ್ಷ ನುಂಗಿ ನೀರು‌ ಕುಡಿದ ಆಟದ ಮೈದಾನ: ಅಧಿಕಾರಿಗಳ ಕೈಚಳಕದಿಂದ ಕಡತದಲ್ಲಿ ಮಾತ್ರ ನಿರ್ಮಾಣವಾದ ಹೊನಲು ಬೆಳಕಿನ ಗ್ಯಾಲರಿ…!

Ad Widget . Ad Widget .

ಪಂಚಾಯತ್ ಮಟ್ಟದಲ್ಲಿಯೇ ಇಂತಹ ಭ್ರಷ್ಟಾಚಾರ ನಡೆದರೆ ಇನ್ನು ದೇಶದಲ್ಲಿ ಅದೆಂತಹ ಅಕ್ರಮಗಳು ನಡೆಯಲ್ಲ ಹೇಳಿ. ಇದು ನಡೆಯುತ್ತಿರುವ ಅಕ್ರಮಗಳ ಒಂದು ಸ್ಯಾಂಪಲ್ ಅಷ್ಟೇ. ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಆಟದ ಮೈದಾನದ ಹೆಸರಿನಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಚಿತ್ರಣವಿದು.

Ad Widget . Ad Widget .

ಮಾಮೂಲಿನಂತೆ ಸರಕಾರಿ ಕಡತಗಳಲ್ಲಿ ಕಾಮಗಾರಿ ನಡೆದಿದೆ. ಎಂ.ಬಿ ಪುಸ್ತಕದಲ್ಲೂ ದಾಖಲಾಗಿದೆ. ಬಿಲ್ ಪಾವತಿಯೂ ಆಗಿದೆ. ಆದರೆ ಅಲ್ಲಿ ಕಾಮಗಾರಿಯೇ ನಡೆದಿಲ್ಲ.

ಸಾಮಾಜಿಕ ಕಾರ್ಯಕರ್ತ ರಾಜಾರಾಂ ಎಂಬವರು ಈ ಬಗ್ಗೆ ವಿಡಿಯೋ ವೊಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು ಸುದ್ದಿ ಮಾಡುತ್ತಿದೆ. ಈ ಕುರಿತಂತೆ ಅವರು ಸಂಬಂಧ ಪಟ್ಟ ಇಲಾಖೆಗೂ ದೂರು ನೀಡಿದ್ದಾರೆ.

ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನಕ್ಕೆ ಹೊನಲು ಬೆಳಕಿನ ಗ್ಯಾಲರಿ ನಿರ್ಮಿಸಲು 9 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಕಡತಗಳಲ್ಲಿ ಹೊನಲು ಬೆಳಕಿನ ಗ್ಯಾಲರಿ ನಿರ್ಮಾಣವಾಗಿದೆ. ಕೆಲಸ ಸಂಪೂರ್ಣಗೊಂಡು ಪಂಚಾಯತ್ ಗೆ ಹ್ಯಾಂಡ್ ಓವರ್ ಕೂಡ ಆಗಿದೆ. ಆದರೆ ಕಾಮಗಾರಿ ನಡೆದ ಸ್ಥಳದಲ್ಲಿ ಬರೀ ಮೈದಾನವಷ್ಟೇ ಇದೆ. ಯಾವುದೇ ಗ್ಯಾಲರಿ ಕಂಡುವರುವುದಿಲ್ಲ. ಕಾಮಗಾರಿ ನಡೆಯದೇ 9 ಲಕ್ಷ ಅವ್ಯವಹಾರ ನಡೆದಿರುದಾಗಿ ಸಾಮಾಜಿಕ ಕಾರ್ಯಕರ್ತ ರಾಜಾರಾಂ ಆರೋಪಿಸಿದ್ದಾರೆ. ಭಾರೀ ಅವ್ಯವಹಾರ ನಡೆದಿರುವುದಾಗಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡುವ ಸಿದ್ಧತೆಯಲ್ಲಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರೂ ಪ್ರಸ್ತುತ ಮಂತ್ರಿಯೂ ಆಗಿರುವ ಎಸ್. ಅಂಗಾರ ರವರು ಈ ಬಗ್ಗೆ ಗಮನ ಹರಿಸಿ ಅವ್ಯವಹಾರ ನಡೆಸಿರುವ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಲೋಕಾಯುಕ್ತ ಈ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

Leave a Comment

Your email address will not be published. Required fields are marked *