ಸಮಗ್ರ ನ್ಯೂಸ್: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಖಾಸಗಿ ಶಾಲೆ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ನಡೆದಿದೆ.
ಶಿಕ್ಷಕಿ ಬಸಮ್ಮ ಆತ್ಮಹತ್ಯೆಗೆ ಶರಣಾದವರು. 10 ವರ್ಷಗಳ ಹಿಂದೆ ಬಸಮ್ಮ ಹಾಗೂ ಅರ್ಜುನ್ ಪ್ರೀತಿಸಿ ಮದುವೆಯಾಗಿದ್ದರು. ಸಹ ಅರ್ಜುನ್ ಶಿಕ್ಷಕನಾಗಿದ್ದ. ಆದರೂ ಅರ್ಜುನ್ ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ.
ಪ್ರೀತಿಸಿ ಮದುವೆಯಾಗಿದ್ದ ಇಬ್ಬರೂ ಹೂವಿನಹಡಗಲಿ ಪಟ್ಟಣದ ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕ- ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ರವಿವಾರ ಪರೀಕ್ಷೆ ಕೆಲಸದ ವೇಳೆ ಶಾಲೆಗೆ ಬಂದು ಶಿಕ್ಷಕಿ ಬಸಮ್ಮ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತಿ ಅರ್ಜುನ್ ಪರಶೆಟ್ಟಿ, ಅತ್ತೆ ಅಂಬಿಕಾ ಪರಶೆಟ್ಟಿ, ನಾದಿನಿ ಸಂಗೀತಾ ಸೇರಿದಂತೆ 6 ಜನರ ವಿರುದ್ಧ ಹೂವಿನಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿಗೂ ಮುನ್ನ ಬಸಮ್ಮ ಡೆತ್ ನೋಟ್ ಬರೆದಿಟ್ಟು, ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.