ಮಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 38 ಶ್ರೀಲಂಕಾ ದೇಶದ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಲಾಡ್ಜ್ ಗಳಲ್ಲಿ ಮತ್ತು ನಗರದ ಕೆಲವು ಮನೆಗಳಲ್ಲಿ ಅವರು ವಾಸಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತ ಲಂಕಾ ಪ್ರಜೆಗಳು ಕಳೆದ ಮಾರ್ಚ್ ತಿಂಗಳಿನಲ್ಲಿ ತಮಿಳುನಾಡಿನ ತೂತುಕುಡಿಗೆ ಆಗಮಿಸಿದ್ದರು. ಅಲ್ಲಿಂದ ಉದ್ಯೋಗಕ್ಕಾಗಿ ಕೆನಡಾಗೆ ಹೋಗುವವರಿದ್ದರು.
ತಮಿಳುನಾಡಿನಲ್ಲಿ ಲಂಕನ್ನರಿಗೆ ಕೆನಡಾದಲ್ಲಿ ಕೆಲಸ ಕೊಡಿಸುವ ಏಜೆಂಟ್ ಳಿದ್ದರು. ಆ ಸಮಯದಲ್ಲಿ ತಮಿಳುನಾಡಿನಲ್ಲಿ ಚುನಾವಣೆ ಇದ್ದುದರಿಂದ ಅವರಿಗೆ ಕೆನಡಾಗೆ ತೆರಳಲಾಗಲಿಲ್ಲ. ಹಾಗಾಗಿ ಅವರನ್ನು ಮಂಗಳೂರಿಗೆ ಕರೆತಂದು ಬಿಡಲಾಗಿತ್ತು. ಎಂದು ಪ್ರಾಥಮಿಕ ವಿಚಾರಣೆ ಸಂದರ್ಭ ತಿಳಿದುಬಂದಿದೆ ಎಂದು ಮಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ.
ಇನ್ನು ಮಂಗಳೂರಿನಲ್ಲಿ ಅಕ್ರಮವಾಗಿ ಅವರಿಗೆ ಆಶ್ರಯ ನೀಡಿದವರು ಯಾರು. ಮಂಗಳೂರಿನಲ್ಲಿ ಇತರ ಏಜೆಂಟುಗಳು ಇದ್ದಾರೆಯೇ. ಅವರುಗಳು ನಿಜವಾದ ಉದ್ದೇಶ ಕೆನಡಾಗೆ ತೆರಳುವುದಾಗಿತ್ತೇ ಎಂಬ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳಿಂದ ತಿಳಿಸಿವೆ.