ಸಮಗ್ರ ನ್ಯೂಸ್: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬೆನ್ನಲ್ಲೇ ಇದೀಗ ಸಚಿವ ಭೈರತಿ ಬಸವರಾಜ್ ವಿರುದ್ಧವೂ ಕೆ ಎಸ್ ಡಿ ಎಲ್ ನೌಕರರ ಸಂಘ ಗಂಭೀರ ಆರೋಪ ಮಾಡಿದೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆ ಎಸ್ ಡಿ ಎಲ್ ಅಧ್ಯಕ್ಷರಾಗಿದ್ದಾಗ 800 ಕೋಟಿ ಅಕ್ರಮ ನಡೆಸಿದ್ದಾರೆ ಎಂಬ ಬಗ್ಗೆ ಆರೋಪ ಮಾಡಿರುವ ಕೆ ಎಸ್ ಡಿ ಎಲ್ ನೌಕರರ ಸಂಘ ಹಿಂದಿನ ಅಧ್ಯಕ್ಷರಾಗಿದ್ದ ಭೈರತಿ ಬಸವರಾಜ್ ಅವರೂ ಕೂಡ 3 ಕೋಟಿಗೂ ಅಧಿಕ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿದೆ.
ಭೈರತಿ ಬಸವರಾಜ್ ಅವರು ಸಿಎಸ್ಆರ್ ಫಂಡ್ ದುರುಪಯೋಗಪಡಿಸಿಕೊಂಡಿದ್ದಾರೆ. ಯಾವುದೇ ಕಂಪನಿ ಶೇ.2ರಷ್ಟು ಸಿ ಎಸ್ ಆರ್ ಫಂಡ್ ಇಡಬೇಕು. ಆದರೆ ಭೈರತಿ ಬಸವರಾಜ್ ಅವರು ಈ ಫಂಡನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಸುಮಾರು 3.75 ಕೋಟಿ ರೂಪಾಯಿ ಹಣವನ್ನು ಸ್ಕೂಲ್ ಗಾಗಿ ಸಚಿವ ಭೈರತಿ ಬಸವರಾಜ್ ತೆಗೆದುಕೊಂಡು ಹೋಗಿದ್ದಾರೆ. ಆ ಹಣ ಏನಾಯಿತು ಎಂಬುದೇ ಗೊತ್ತಿಲ್ಲ. ಈ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು ಎಂದು ಕೆ ಎಸ್ ಡಿ ಎಲ್ ನೌಕರರ ಸಂಘ ಒತ್ತಾಯಿಸಿದೆ.
ಒಟ್ಟಾರೆ ಚುನಾವಣಾ ಹೊಸ್ತಿಲಲ್ಲಿ ರಾಜ್ಯ ಸರ್ಕಾರದ ಒಂದೊಂದೇ ಭ್ರಷ್ಟಾಚಾರಗಳು ಬಯಲಾಗುತ್ತಿದ್ದು, ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬೈರತಿ ಬಸವರಾಜ್ ಮೇಲೆ ಕೇಳಿಬಂದ ಆರೋಪಕ್ಕೆ ಸಿಎಂ ಬೊಮ್ಮಾಯಿ ಏನು ಕ್ರಮ ತೆಗೆದುಕೊಳ್ಳುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.