ಸಮಗ್ರ ನ್ಯೂಸ್: ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ನಲ್ಲಿ ಇತ್ತೀಚೆಗೆ ನಡೆದಿದ್ದ ವಿಧಾನಸಭಾ ಚುನಾವಣೆಯ ಮತಎಣಿಕೆ ಗುರುವಾರ (ಮಾರ್ಚ್ 02) ಬೆಳಗ್ಗೆ ಆರಂಭಗೊಂಡಿದ್ದು, ಆರಂಭಿಕ ಹಂತದ ಮತಎಣಿಕೆಯಲ್ಲಿ ಈಶಾನ್ಯದ ನಾಗಾಲ್ಯಾಂಡ್ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯಭೇರಿ ಗಳಿಸಿದೆ.
ಆರಂಭಿಕ ಸುತ್ತುಗಳಲ್ಲಿ ತ್ರಿಪುರದ 60 ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳ ಮತ ಎಣಿಕೆ ಶುರುವಾಗಿದ್ದು, ಬಿಜೆಪಿ ಮೈತ್ರಿಕೂಟ 35, ಸಿಪಿಎಂ 4, ಟಿಎಂಪಿ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ನಾಗಾಲ್ಯಾಂಡ್ 60 ಕ್ಷೇತ್ರಗಳಲ್ಲಿ 42 ಕ್ಷೇತ್ರಗಳ ಮತ ಎಣಿಕೆ ಆರಂಭಿಕ ಸುತ್ತಿನಲ್ಲಿ ಎನ್‌ಡಿಪಿಪಿ 31, ಎನ್‌ಪಿಎಫ್ 10, ಕಾಂಗ್ರೆಸ್ 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ಮೇಘಾಲಯದ 60 ಕ್ಷೇತ್ರಗಳಲ್ಲಿ 56 ಕ್ಷೇತ್ರಗಳ ಮತ ಎಣಿಕೆ ಶುರುವಾಗಿದ್ದು, ಬಿಜೆಪಿ 10, ಕಾಂಗ್ರೆಸ್ 6, ಎನ್.ಪಿ.ಪಿ. 25, ಇತರರು 15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.