ಸಮಗ್ರ ನ್ಯೂಸ್: ಗ್ಯಾಸ್ಟ್ರಿಕ್ ಸಮಸ್ಯೆ ಕಾಡಲು ಪ್ರಮುಖ ಕಾರಣ ನಮ್ಮ ಜೀವನ ಶೈಲಿ. ನಾವು ಸೇವಿಸುವ ಆಹಾರ ಸರಿಯಾಗಿ ಇರದೇ ಇರುವುದರಿಂದ ದೇಹದಲ್ಲಿ ಹೆಚ್ಚಿನ ಗ್ಯಾಸ್ ಉತ್ಪತ್ತಿಯಾಗುತ್ತದೆ. ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ, ಹೆಚ್ಚು ಗ್ಯಾಸ್ ರೀಲಿಸ್ ಆಗಬೇಕು. ಇದು ಹೊರಹೋಗದಿದ್ದರೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಓಮ ಕಾಳು ಇದಕ್ಕೆ ಅತ್ಯುತ್ತಮ ಮದ್ದಾಗಬಲ್ಲದು. ಇದರಲ್ಲಿ ಫೈಬರ್ ಹಾಗೂ ಮಿನರಲ್ಸ್ ಇದ್ದು ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮಲಬದ್ಧತೆ ಹಾಗೂ ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಎರಡು ಲೋಟ ನೀರಿಗೆ ಹಾಕಿ ಒಂದು ಚಮಚದಷ್ಟು ಓಮ ಕಾಳುಗಳನ್ನು ಹಾಕಿ ಕುದಿಸಿ. ಜೊತೆಗೆ ಪುದಿನಾ ಸೇರಿಸಿ. ಇದರಲ್ಲಿ ಮ್ಯಾಂಗನೀಸ್, ವಿಟಮಿನ್ಸ್, ಫೈಬರ್ ಹೇರಳವಾಗಿದೆ. ಇದು ಹೊಟ್ಟೆ ನೋವು, ಹೊಟ್ಟೆ ಉಬ್ಬರವನ್ನು ನಿವಾರಣೆ ಮಾಡುತ್ತದೆ. ನಂತರ ಒಣ ಶುಂಠಿ ಪುಡಿಯನ್ನು ಸೇರಿಸಿ. ದೇಹದಲ್ಲಿ ಇನ್ಫೆಕ್ಷನ್ ಸಮಸ್ಯೆ ಇದ್ದರೆ ಅದರ ನಿವಾರಣೆಗೆ ಶುಂಠಿ ಉಪಕಾರಿ.
ಇವೆಲ್ಲವನ್ನೂ ಸೇರಿಸಿ ಎರಡು ಗ್ಲಾಸ್ ನೀರು ಒಂದು ಗ್ಲಾಸ್ ಆಗುವ ತನಕ ಕುದಿಸಿ. ತಣ್ಣಗಾದ ಬಳಿಕ ಸೋಸಿ. ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯಿರಿ. ಇದನ್ನು ಹತ್ತು ದಿನಗಳ ಕಾಲ ನಿಯಮಿತವಾಗಿ ಕುಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.
(ಸೂಚನೆ: ಇಲ್ಲಿ ಹೇಳಲಾದ ಸಲಹೆಗಳು ತಜ್ಞರ ಅಭಿಪ್ರಾಯದಂತೆ ಹೇಳಲಾಗಿದೆ. ಅದಾಗ್ಯೂ ಉಪಯೋಗಿಸುವ ಮೊದಲು ನಿಮ್ಮ ಆರೋಗ್ಯ ತಜ್ಞರ ಸಲಹೆ ಪಡೆದುಕೊಳ್ಳಿ)