ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮುಖಂಡರಿಂದ ಮಂಗಳೂರು ಉತ್ತರ ವಿಧಾನ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಯಿತು.
ಈ ಸಭೆಯಲ್ಲಿ ಸೇರಿದ್ದ ಬಹಳಷ್ಟು ಮುಸ್ಲಿಂ ಮುಖಂಡರು ಹಾಗೂ ನಾಯಕರು ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಪರ ಒಲವು ವ್ಯಕ್ತಪಡಿಸಿದ್ದು ಇನಾಯತ್ ಅಲಿಯವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದರು. ಸಭೆಯಲ್ಲಿ ಮೊಹಿಯುದ್ದೀನ್ ಬಾವ ಸೇರಿದ್ದ ಮುಖಂಡರಲ್ಲಿ ಕ್ಷೇತ್ರದಲ್ಲಿ ಆಂತರಿಕ ಸಮೀಕ್ಷೆ ನಡೆಸುವಂತೆ ಮನವಿ ಮಾಡಿದ್ದು ಸಮೀಕ್ಷೆಯಲ್ಲಿ ಮತದಾರರು ಯಾರ ಪರ ಒಲವು ವ್ಯಕ್ತ ಪಡಿಸಿದ್ದು, ಅವರಿಗೆ ಟಿಕೆಟ್ ನೀಡಿ ಎಂದು ಸಭೆಯಲ್ಲಿ ಅಗ್ರಹ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೊನೆಯಲ್ಲಿ ಸಭೆ ಯಾವುದೇ ತಾರ್ಕಿಕ ಅಂತ್ಯ ಕಾಣದೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಕೆ. ಮಹಮ್ಮದ್ ಮಸೂದ್,ಶಾಸಕ ಯು.ಟಿ. ಖಾದರ್, ಯಾನಪೋಯ ಅಬ್ದುಲ್ಲಕುಂಞ ಮತ್ತು ವಖ್ಫ್ ಬೋರ್ಡ್ ಅಧ್ಯಕ್ಷರಾದ ನಾಸಿರ್ ಲಕ್ಕಿಸ್ಟಾರ್ ಸಹಿತ ನಾಯಕರ ವಿಮೋಚನೆಗೆ ವಹಿಸಿದ್ದು ಮುಂದಿನ ದಿನದಲ್ಲಿ ಮತ್ತೊಂದು ಸುತ್ತಿನ ಸಭೆಯಲ್ಲಿ ಎಲ್ಲವೂ ಸರಿ ಹಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಆದರೆ ನಿನ್ನೆ ನಡೆದ ಸಭೆಯನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪೋರ್ಟಲ್ ನ್ಯೂಸ್ ಗಳಲ್ಲಿ ಅಪಾರ್ಥ ಮಾಡಿಕೊಂಡು ಸುಳ್ಳು ಸುದ್ದಿ ಗಳನ್ನು ಪ್ರಸರ ಪಡಿಸಿ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಇನಾಯತ್ ಅಲಿ, ಮೊಹಿದೀನ್ ಬಾವ ಎಂಬ ಶೀರ್ಷಿಕೆ ನೀಡಿ ಪ್ರಚಾರ ಪಡಿಸುತ್ತಿದ್ದು ಇದು ಸಂಪೂರ್ಣ ಸುಳ್ಳು ಸುದ್ದಿ ಯಾಗಿದ್ದು ಯಾರು ಕೂಡ ಸುಳ್ಳು ಸುದ್ದಿ ಅಥವಾ ವದಂತಿಗಳಿಗೆ ಕಿವಿ ಕೊಡಬಾರದಾಗಿ ಸಭೆಯಲ್ಲಿ ಭಾಗವಹಿಸಿದ ಮುಖಂಡರು ತಿಳಿಸಿದ್ದು ಒಂದೆರಡು ದಿನಗಲ್ಲಿ ಇದಕ್ಕೆ ಪರಿಹಾರ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಕೆ. ಮಹಮ್ಮದ್ ಮಸೂದ್,ಶಾಸಕ ಯು.ಟಿ. ಖಾದರ್, ಯಾನಪೋಯ ಅಬ್ದುಲ್ಲಕುಂಞ ಮತ್ತು ವಖ್ಫ್ ಬೋರ್ಡ್ ಅಧ್ಯಕ್ಷರಾದ ನಾಸಿರ್ ಲಕ್ಕಿಸ್ಟಾರ್ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.