Ad Widget .

ಯಾರಾಗಬೇಕು ಕರ್ನಾಟಕದ ಮುಂದಿನ ಸಿಎಂ? ಟ್ವಿಟರ್ ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಫಸ್ಟ್, ಬೊಮ್ಮಾಯಿ ಲಾಸ್ಟ್

ಸಮಗ್ರ ನ್ಯೂಸ್: ಟ್ವಿಟ್ಟರ್‌ನಲ್ಲಿ ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು? ಎಂದು ಇತ್ತೀಚೆಗೆ ಮತಗಣನೆ ನಡೆದಿತ್ತು. ಪಿಎಲ್‌ಇ ಕರ್ನಾಟಕದ ಖಾತೆಯಿಂದ ನಡೆದ ಈ ಜನ ಮತಗಣನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಧಿಕ ಜನರು ಒಲವು ತೋರಿದ್ದಾರೆ. ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರಿಗೆ ಅತ್ಯಂತ ಕಡಿಮೆ ಮತಗಳು ಬಿದ್ದಿವೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಫೆಬ್ರವರಿ 3ರಂದು ಪಿಎಲ್‌ಇ ಕರ್ನಾಟಕ ಆರಂಭಿಸಿದ ಈ ಮತಗಣನೆಯಲ್ಲಿ ಬಹುತೇಕರು ಸಿದ್ದರಾಮಯ್ಯ ಪರ ಒಲವು ತೋರಿದ್ದಾರೆ. ಈ ಖಾತೆಗೆ ಹತ್ತು ಸಾವಿರ ಫಾಲೋವರ್ಸ್‌ ಇದ್ದು, ಸುಮಾರು 2 ಸಾವಿರ ಜನರು ಮತ ಚಲಾವಣೆ ಮಾಡಿದ್ದಾರೆ. ಅಂದಹಾಗೆ ಪಿಎಲ್‌ಇ ಕರ್ನಾಟಕ ಅಂದ್ರೆ ಪ್ರಮೋಟ್‌ ಲಿಂಗ್ವಿಸ್ಟಿಕ್‌ ಈಕ್ವಾಲಿಟಿ ಎಂದಾಗಿದ್ದು, ಕನ್ನಡವನ್ನು ಸಹ ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡುವುದು ನಮ್ಮ ಗುರಿ ಎಂದು ವಿವರಣೆ ನೀಡಲಾಗಿದೆ.

Ad Widget . Ad Widget . Ad Widget .

ಮುಂದಿನ ಸಿಎಂ ಯಾರಾಗಬೇಕು ಎಂಬ ಮತಗಣನೆಯಲ್ಲಿ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. ಈ ಖಾತೆ ಬೆಂಬಲಿಸುತ್ತ ಬಂದಿರುವ ಕರ್ನಾಟಕ ರಾಷ್ಟ್ರ ಸಮಿತಿಯ ರವಿ ಕೃಷ್ಣ ರೆಡ್ಡಿಗೆ ಮತಗಣನೆಯಲ್ಲಿ ಮೊದಲ ಸ್ಥಾನ ನೀಡಲಾಗಿತ್ತು. ಎರಡನೇ ಸ್ಥಾನವನ್ನು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಗೆ ನೀಡಲಾಗಿತ್ತು. ಮೂರನೇ ಸ್ಥಾನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಲಾಗಿದ್ದು. ಕೊನೆಯ ಸ್ಥಾನವನ್ನು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೀಡಲಾಗಿತ್ತು.

ಈ ಮತಗಣನೆಯಲ್ಲಿ ಮೊದಲ ಮೂರು ಹೆಸರುಗಳಿಗೆ ಅತ್ಯಧಿಕ ಮತಗಳು ಬಿದ್ದಿವೆ. ಸಿದ್ದರಾಮಯ್ಯನವರು ಶೇಕಡ 35.4 ಮತ ಪಡೆದಿದ್ದಾರೆ. ಎರಡನೇ ಸ್ಥಾನವನ್ನು ಶೇಕಡ 29.5 ಮತದಿಂದ ಕುಮಾರಸ್ವಾಮಿ ಪಡೆದಿದ್ದಾರೆ. ಈ ಖಾತೆ ಬೆಂಬಲಿಸುತ್ತ ಬಂದಿರುವ ರವಿ ಕೃಷ್ಣಾ ರೆಡ್ಡಿಯವರು ಶೇಕಡ 26.5 ಮತ ಪಡೆದಿದ್ದಾರೆ. ಬಿಜೆಪಿಯ ಬೊಮ್ಮಾಯಿಗೆ ಶೇಕಡ 8.6 ಮತ ದೊರಕಿದೆ.

Leave a Comment

Your email address will not be published. Required fields are marked *