Ad Widget .

ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಇವರೇನಾ? ಕೇಸರಿ ಭದ್ರಕೋಟೆಗೆ ಹೊಸ ಮುಖ!?

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಬಿಜೆಪಿಯ ಭದ್ರ ಕೋಟೆ. ಇಲ್ಲಿ ಸತತ ಮೂವತ್ತು ವರ್ಷಗಳಿಂದ ಪ್ರತಿ ಚುನಾವಣೆಯಲ್ಲಿ ಕಮಲ ಅರಳುತ್ತಲೇ ಬಂದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಕ್ಷೇತ್ರದ ಜನ ಪ್ರತಿ ಚುನಾವಣೆಯಲ್ಲಿ ಸಹ ಬಿಜೆಪಿ ಪಕ್ಷವನ್ನು ಗೆಲ್ಲಿಸಿಕೊಡುತ್ತಿದ್ದು ಇಲ್ಲಿ ಎಸ್ ಅಂಗಾರ ರವರು ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮೀಸಲಾತಿ ಕ್ಷೇತ್ರವಾಗಿರುವ ಕಾರಣ ಇಲ್ಲಿ ದಲಿತ ಅಭ್ಯರ್ಥಿಗಳಿಗೆ ಮಾತ್ರ ಸ್ವರ್ಧಿಸಲು ಅವಕಾಶ ಇರುವ ಕಾರಣ ಸತತ ಆರು ಬಾರಿ ಎಸ್ ಅಂಗಾರವರು ಗೆದ್ದು ವಿಜಯದ ಪತಾಕೆ ಹಾರಿಸುತ್ತಿದ್ದಾರೆ. ಇಲ್ಲಿನ ಜನ ಎಸ್ ಅಂಗಾರ ರವರನ್ನು ಕೇವಲ ಶಾಸಕರನ್ನಾಗಿ ಮಾತ್ರವಲ್ಲ ಅವರನ್ನು ಸಚಿವರನ್ನಾಗಿ ಮಾಡುವವರೆಗೂ ಸುಳ್ಯ ವಿಧಾನ ಸಭಾ ಕ್ಷೇತ್ರದ ಜನತೆ ಅವರನ್ನು ಕೈ ಬಿಟ್ಟಿಲ್ಲ.

Ad Widget . Ad Widget . Ad Widget .

ಆದರೆ ಈಗ ಸುಳ್ಯದಲ್ಲಿ ಬದಲಾವಣೆಯ ಕೂಗು ಕೇಳಿ ಬರುತ್ತಿದೆ. ಶಾಸಕ ಎಸ್ ಅಂಗಾರ ಇದೀಗ ಕರ್ನಾಟಕ ಸರಕಾರದಲ್ಲಿ ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿದ್ದಾರೆ. ಸುಳ್ಯದ ಜನಪ್ರಿಯ ಶಾಸಕರು ಮತ್ತು ಮೀನುಗಾರಿಕಾ ಸಚಿವರಾಗಿ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಅಂಗಾರರಿಗೆ ಈ ಸಲ ಟಿಕೇಟ್ ನೀಡಿದರೆ ಬಿಜೆಪಿ ಸೋಲುವುದು ಖಚಿತ ಎಂಬ ಮಾತು ಬಿಜೆಪಿ ಕಾರ್ಯಕರ್ತರೆ ಹೇಳುತ್ತಿದ್ದು ಈ ಸಲ ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾಗಬೇಕು ಎಂಬ ಮಾತುಗಳು ಕೇಳಿಬರುತ್ತಿದೆ.

ಹಾಗದರೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಮುಂದಿನ ಬಿಜೆಪಿ ಅಭ್ಯರ್ಥಿ ಯಾರು? ಈ ಪ್ರಶ್ನೆಗೆ ಇನ್ನು ಸರಿಯಾದ ಉತ್ತರ ಸಿಕ್ಕಿಲ್ಲ. ಈಗಾಗಲೇ ಈ ಬಗ್ಗೆ ಅನೇಕ ಹೆಸರುಗಳು ಕೇಳಿಬರುತ್ತಿದ್ದು ಸುಳ್ಯ ಕ್ಷೇತ್ರದ ಶಾಸಕರಾಗುವುದಕ್ಕೆ ತಾ ಮುಂದು ನಾ ಮುಂದು ಎಂಬಂತೆ ಆಕಾಂಕ್ಷಿಗಳು ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂದು ಹೇಳಬಹುದು.

ಅದೇನೆ ಇದ್ದರು ಯಾರ ಹೆಸರು ಕೇಳಿ ಬಂದರು ಕೂಡ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಅಂತಿಮ ಮುದ್ರೆ ಒತ್ತುವುದು ಹೈಕಮಾಂಡ್ ಅನ್ನೋದು ಪ್ರತಿಯೊಬ್ಬ ಕಾರ್ಯಕರ್ತನಿಗೂ ತಿಳಿದಿರುವ ವಿಚಾರ. ಬಿಜೆಪಿ ಅಭ್ಯರ್ಥಿಗಳು ಯಾರಾಗುತ್ತಾರೆಂದರೆ ಆ ಆಯ್ಕೆಗೆ ಒಂದಷ್ಟು ನಿಯಮಗಳಿರುತ್ತವೆ.

ಕಮಲ ಅರಳಿಸುವುದಕ್ಕೆ ಪ್ರತಿಯೊಬ್ಬರಿಂದಲು ಸಾಧ್ಯವಿದೆ. ಆದರೆ ಸ್ಪರ್ಧೆಯಲ್ಲಿ ಭಾಗವಹಿಸುವ ಕುದುರೆ ಆರ್ ಎಸ್ ಎಸ್ ಸಿದ್ಧಾಂತದಿಂದ ಬೆಳೆದವರಿರಬೇಕು. ಕೇವಲ ಸಿದ್ದಾಂತ ಮಾತ್ರವಲ್ಲ ಸಂಘಟನೆ ಸೇರಿದಂತೆ ರಾಜಕೀಯವಾಗಿ ತಕ್ಕ ಮಟ್ಟಿನ ಅನುಭವ ಹೊಂದಿರಬೇಕು ಹಾಗೇನೆ ರಾಜ್ಯ ನಾಯಕರುಗಳ ಸಂಪರ್ಕವನ್ನು ಬೆಳೆಸಿಕೊಂಡಿರಬೇಕು.

ಕಾರ್ಯಕರ್ತರ ಮನವಿಯನ್ನು ಕೇಸರಿ ಪಾಳಯ ಸ್ವಾಗತಿಸಲು ಸಿದ್ದಗೊಳ್ಳುತ್ತಿದ್ದು ಈ ಸಲ ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ದಿನೇಶ್ ಅಮ್ಟೂರು ರವರು ಸ್ಪರ್ಧಿಸಲಿದ್ದಾರೆ‌ ಎಂಬ ಸುದ್ದಿ ಪಕ್ಕಾ ಆಗ್ತಿದೆ. ಕಳೆದ ಎರಡು ಚುನಾವಣೆಯಲ್ಲಿ ದಿನೇಶ್ ಅಮ್ಟೂರು ರವರ ಹೆಸರು ಕೇಳಿ ಬಂದಿತ್ತು. ಈ ಬಾರಿ ಸುಳ್ಯದಲ್ಲಿ ಎಸ್ ಅಂಗಾರರ ಬದಲಿಗೆ ದಿನೇಶ್ ಅಮ್ಟೂರು ರವರನ್ನು ಕಣಕ್ಕಿಳಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಏನೇ‌ ಆದರೂ ಬಿಜೆಪಿ ಈ ಬಾರಿ ಸುಳ್ಯ ಕ್ಷೇತ್ರದಲ್ಲಿ ‌ಅಳೆದು ತೂಗಿ‌ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಕಾಂಗ್ರೆಸ್ ಕೂಡಾ ಇದುವರೆಗೂ ಅಭ್ಯರ್ಥಿ ಹೆಸರು ರಿವೀಲ್ ಮಾಡಿಲ್ಲ. ಇವರಿಬ್ಬರಿಗೆ ಟಕ್ಕರ್ ನೀಡಲು ಆಪ್ ಈಗಾಗಲೇ ಅಭ್ಯರ್ಥಿ ಹೆಸರನ್ನು ಬಹುತೇಕ ಘೋಷಿಸಿಕೊಂಡಿದೆ. ಮಾಜಿ ಶಾಸಕ ಕೆ. ಕುಶಲರ ಪುತ್ರಿ ಸುಮನಾ ಬೆಳ್ಳಾರ್ಕರ್ ಆಪ್ ನಿಂದ ಕಣಕ್ಕೆ ಇಳಿಯಲಿದ್ದು, ಇವರು ಉಳಿದ ಪಕ್ಷಗಳಿಗೆ ಮುಟ್ಟಿ ನೋಡಿಕೊಳ್ಳುವ ಹೊಡೆತ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ‌ಸುಳ್ಯ ಕ್ಷೇತ್ರದಲ್ಲಿ ಚುನಾವಣೆ ಕಾವು ಈ ಹಿಂದಿಗಿಂತಲೂ ಹೆಚ್ಚಾಗುವ ಲಕ್ಷಣಗಳಿದೆ.

Leave a Comment

Your email address will not be published. Required fields are marked *