ಸಮಗ್ರ ನ್ಯೂಸ್: ದನ ಬೆದರಿಸುವ ಸ್ಪರ್ಧೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಜಿಲ್ಲೆಯ ರಾಣೆಬೆನ್ನೂರಿನ ಮೈಸೂರು ಹುಲಿ ಎಂದೇ ಖ್ಯಾತಿ ಪಡೆದಿದ್ದ ಹೋರಿ ಸಾವನ್ನಪ್ಪಿದೆ.
ಕಳೆದ ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಹುಲಿ ಎಂಬ ಹೆಸರಿನ ಎತ್ತು ಮೃತಪಟ್ಟಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದೆ. ಮೈಸೂರು ಹುಲಿ ಸಾವಿಗೆ ಹೋರಿಯ ಮಾಲೀಕರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಹೋರಿಯು ರಾಣೆಬೆನ್ನೂರು ನಗರದ ಪ್ರಸಿದ್ದ ಕುಸ್ತಿಪಟು ನಂಜಪ್ಪ ಗೂಳಣ್ಣನವರ್ ಅವರ ಮನೆತನಕ್ಕೆ ಸೇರಿತ್ತು. ಕುಸ್ತಿಪಟು ನಂಜಪ್ಪ ಅವರು ಆಗಿನ ಕಾಲದಲ್ಲಿಯೇ ಕುಸ್ತಿಯಲ್ಲಿ ಖ್ಯಾತಿ ಪಡೆದು ಮೈಸೂರಿನ ಹುಲಿ ಎಂದು ಪ್ರಸಿದ್ಧರಾಗಿದ್ದರು. ಇವರ ಮನೆತನವು ಹೋರಿಯನ್ನು ಸಲುಹಿದ್ದ ಕಾರಣ ಹೋರಿಗೆ ಮೈಸೂರು ಹುಲಿ ಎಂದು ಕರೆಯಲಾಗುತ್ತಿತ್ತು.