ಸಮಗ್ರ ನ್ಯೂಸ್: ಗೋವು ಭಾರತೀಯರ ಹೃದಯ ಬಡಿತವಾಗಿದೆ. ಭಾರತದ ಸಂಪೂರ್ಣ ಆಧ್ಯಾತ್ಮಿಕ ಚಿತ್ರಣವು ಹಸುವನ್ನ ಅದರ ಕೇಂದ್ರವಾಗಿ ಹೆಣೆದುಕೊಂಡಿರುವುದು ಕಂಡುಬರುತ್ತದೆ. ಗೋವನ್ನು ಭಾರತದಲ್ಲಿ ಮಾತೆ ಎಂದು ಪೂಜಿಸುತ್ತಾರೆ.
ಇಲ್ಲಿ ಗೋವಂತೆ ಮೂರು ದೇವತೆಗಳನ್ನ ಒಂದೇ ಸ್ಥಳದಲ್ಲಿ ಪೂಜಿಸುವ ಒಂದು ರೂಪವಾಗಿದ್ದು, ಗೋವುಗಳಿಂದ ಹೊರಹೊಮ್ಮುವ ಪಂಚಗವ್ಯಗಳನ್ನು ಪಂಚಾಮೃತವೆಂದು ಪರಿಗಣಿಸುವ ಪುಣ್ಯಭೂಮಿ ಇದು. ವೇದಕಾಲದಿಂದಲೂ ಗೋವು ಮನುಕುಲದ ಅದಿದೇವತೆಯಾಗಿದೆ.
ಆದರೆ ಭಾರತಕ್ಕಷ್ಟೇ ಗೋವು ಪೂಜನೀಯ ಎಂದು ಭಾವಿಸಿದರೆ ನಿಮ್ಮ ಭಾವನೆ ತಪ್ಪು. ಗೋವನ್ನು ಪೂಜನೀಯವಾಗಿ ಕಾಣುವ ಮತ್ತೊಂದು ದೇಶವಿದೆ. ದಕ್ಷಿಣ ಸುಡಾನ್ನ ‘ಗಡಿ’ ಬುಡಕಟ್ಟು ಜನಾಂಗದವರಿಗೆ ಹಸು ಎಂದರೆ ತಾಯಿ, ದೇವರು. ಗೋಮೂತ್ರವನ್ನು ಪರಮ ತೀರ್ಥವೆಂದು ಪರಿಗಣಿಸಲಾಗಿದ್ದು, ಹಸುಗಳನ್ನ ಮನೆಗಳಲ್ಲಿ ಸಾಕುತ್ತಾರೆ. ಅದು ಅವರ ಜೀವನಾಧಾರವೂ ಹೌದು.
ಇನ್ನು ಇದಲ್ಲದೇ, ಹಸುಗಳು ಯಾವಾಗ ಮೂತ್ರ ವಿಸರ್ಜಿಸುತ್ತವೆ ಎಂದು ಪುರುಷರು ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಹಸು ಮೂತ್ರ ಮಾಡಲು ಪ್ರಾರಂಭಿಸಿದಾಗ, ಅದರ ಮುಂದೆ ಅವ್ರ ತಲೆಯನ್ನು ಒಡ್ಡುತ್ತಾರೆ. ಇನ್ನೀದು ಕೂದಲಿನ ಉತ್ತಮ ಬಣ್ಣ ಮತ್ತು ಬಲ ಪಡೆಯಲು ಸಹಾಯ ಮಾಡುತ್ತದೆ ಎಂದು ಅವರು ನಂಬುತ್ತಾರೆ. ಅದಕ್ಕೇ ಅವರ ಕೂದಲು ಹೊಂಬಣ್ಣದಲ್ಲಿದ್ದು, ಅಂತಹ ವಿಶೇಷ ಬಣ್ಣದ ಕೂದಲಿನ ಪುರುಷರನ್ನ ಅಲ್ಲಿನ ಮಹಿಳೆಯರು ಇಷ್ಟಪಡುತ್ತಾರೆ.
ಅಷ್ಟೇ ಅಲ್ಲ, ಅಲ್ಲಿನ ಗಂಡಸರು ಕೆಲವೊಮ್ಮೆ ಗೋಮೂತ್ರದಿಂದ ಸ್ನಾನ ಮಾಡುತ್ತಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ‘ಗಡಿ’ ಜನರ ಬಗ್ಗೆ ತಿಳಿದುಕೊಳ್ಳಲು ಅಲ್ಲಿಗೆ ಹೋಗುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಒಟ್ಟಾರೆ ಭಾರತಕ್ಕೆ ಮಾತ್ರ ಪೂಜನೀಯವಾಗಿದ್ದ ಗೋವು ಸುಡಾನ್ ನಲ್ಲೂ ಪೂಜಿಸಲ್ಪಡುವುದು ಆಶ್ಚರ್ಯದ ಜೊತೆಗೆ ಹೆಮ್ಮೆ ಎನಿಸುತ್ತದೆ.