ಸಮಗ್ರ ನ್ಯೂಸ್: ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಅವಕಾಶ ಮಿಸ್ ಮಾಡಿಕೊಂಡ ಭಾರತ, ಇದೀಗ ಜಪಾನ್ ವಿರುದ್ಧ 5-0 ಅಂತರದ ಗೋಲು ಸಿಡಿಸಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ 9ನೇ ಸ್ಥಾನ ಖಚಿತಪಡಿಸಿಕೊಂಡಿದೆ. ಕ್ಲಾಸಿಫಿಕೇಶನ್ ಪಂದ್ಯದಲ್ಲಿ ಭಾರತ ಅಬ್ಬರಿಸಿತು.
ಜಪಾನ್ ವಿರುದ್ಧ ಮೊದಲ ಕ್ವಾರ್ಟರ್‌ಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ,3 ಹಾಗೂ 4 ಕ್ವಾರ್ಟರ್‌ನಲ್ಲಿ ಗೋಲು ಸಿಡಿಸಿ ಭರ್ಜರಿ 8-0 ಅಂತರದಿಂದ ಗೆಲುವು ದಾಖಲಿಸಿತು.
ಮೊದಲ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಸಿಡಿಸುವ ಅವಕಾಶ ಒಲಿದು ಬಂದಿತ್ತು. ಆದರೆ ಗೋಲಾಗಿ ಪರಿವರ್ತನೆಯಾಗಲಿಲ್ಲ. ಹೀಗಾಗಿ ಮೊದಲ ಕ್ವಾರ್ಟರ್ ಉಭಯ ತಂಡಗಳು ಗೋಲಿಲ್ಲದೆ ನಿರಾಸೆ ಅನುಭವಿಸಿತು. ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಜಪಾನ್ ಮೇಲಿಂದ ಮೇಲೆ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಭಾರತದ ಬಲಿಷ್ಠ ರಕ್ಷಣೆಯಿಂದ ಯಾವುದೇ ಗೋಲು ದಾಖಲಾಗಲಿಲ್ಲ. 2ನೇ ಕ್ವಾರ್ಟರ್ ಕೂಡ ಗೋಲಿಲ್ಲದೆ ಅಂತ್ಯಗೊಂಡಿತು.
33ನೇ ನಿಮಿಷದಲ್ಲಿ ಭಾರತ ಮೊದಲ ಗೋಲು ಸಿಡಿಸಿತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಮನ್ದೀಪ್ ಸಿಂಗ್ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಜಪಾನ್ ವಿರುದ್ದ ಭಾರತ ಗೋಲಿನ ಖಾತ ತೆರೆಯಿತು. 36ನೇ ನಿಮಿಷದಲ್ಲಿ ಅಭಿಷೇಕ್ ಸಿಡಿಸಿದ ಗೋಲಿನಿಂದ ಭಾರತ 2-0 ಮುನ್ನಡೆ ಕಾಯ್ದುಕೊಂಡಿತು.
40 ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಆದರೆ ರಿಬೌಂಡ್ ಮೂಲಕ ವಿವೆಕ್ ಸಾಗರ್ ಗೋಲು ಸಿಡಿಸಿದರು. 44ನೇ ನಿಮಿಷದಲ್ಲಿ ಅಭಿಷೇಕ್ ಮತ್ತೊಂದು ಗೋಲು ಸಿಡಿಸಿ ಮಿಂಚಿದರು. ಈ ಮೂಲಕ 4-0 ಅಂತರ ಕಾಯ್ದುಕೊಂಡಿತು. ಮೂರನೇ ಕ್ವಾರ್ಟರ್ ಅಂತ್ಯದ ವೇಳೆ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.
ನಾಲ್ಕನೇ ಕ್ವಾರ್ಟರ್ ಆರಂಭದಲ್ಲೇ ಭಾರತ ಗೋಲು ಸಿಡಿಸಿ ಸಂಭ್ರಮಿಸಿತು. 46ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಗೋಲು ಸಿಡಿಸಿದರು. 46ನೇ ನಿಮಿಷದಿಂದ ಭಾರತ ಸತತ ಗೋಲು ಸಿಡಿಸಿ ಸಂಭ್ರಮಿಸಿತು. 59ನೇ ನಿಮಿಷದಲ್ಲಿ 2 ಗೋಲು ಸಿಡಿಸಿದರೆ. 60ನೇ ನಿಮಿಷದಲ್ಲಿ ಮತ್ತೊಂದು ಗೋಲು ಸಿಡಿಸಿತು. ಈ ಮೂಲಕ ಭಾರತ 8-0 ಅಂತರದಲ್ಲಿ ಗೆಲುವು ದಾಖಲಿಸಿತು.