ಸಮಗ್ರ ನ್ಯೂಸ್: ಪೋಷಕರು ತಮ್ಮ ಮಕ್ಕಳು ಯಾವುದೇ ದುಷ್ಚಟಗಳಿಗೆ ಬಲಿಯಾಗದೆ ಉತ್ತಮರಾಗಿರಬೇಕು, ಕಾಲೇಜಿನ ಶಿಕ್ಷಣ ಅದಕ್ಕೆ ಪೂರಕವಾಗಿರಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಆದರೆ, ಈ ಕಾಲೇಜು ಕ್ಯಾಂಪಸ್‌ಗಳೇ ಅಕ್ರಮಗಳ ಅಡ್ಡೆಯಾಗಿ ಬದಲಾಗುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು ವಿವಿಯ ಹುಡುಗರ ಹಾಸ್ಟೆಲ್ ಬಳಿ ಕಾಂಡೋಮ್ ಕವರ್‌ಗಳು ಪತ್ತೆಯಾಗಿವೆ. ಜತೆಗೆ ಅಲ್ಲಲ್ಲಿ ಕಾಂಡೋಮ್‌ಗಳು ಬಿದ್ದಿವೆ. ಇಷ್ಟೇ ಅಲ್ಲ, ಹಾಸ್ಟೆಲ್ ಸುತ್ತ ಬಿಯರ್ ಬಾಟಲ್‌ಗಳು ಕೂಡಾ ಪತ್ತೆಯಾಗಿವೆ.
ಹಾಗಿದ್ದರೆ ಕಾಲೇಜು ಕ್ಯಾಂಪಸ್‌ನಲ್ಲಿ, ಅದರಲ್ಲೂ ಹುಡುಗರ ಹಾಸ್ಟೆಲ್‌ನಲ್ಲಿ ಅನೈತಿಕ ಮತ್ತು ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆಯಾ ಎಂಬ ಅನುಮಾನ ಕಾಡಿದೆ. ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರು ಈ ವಿಚಾರದಲ್ಲಿ ಗಂಭೀರವಾಗಿ ಪರಿಶೀಲನೆ ನಡೆಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಶಾಲೆಯ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿ ಭಾರಿ ಸುದ್ದಿಯಾಗಿತ್ತು. ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ಚಟಕ್ಕೆ ಬಿದ್ದಿದ್ದಾರೆ ಎಂಬ ಸುದ್ದಿ ಬಹುಕಾಲದಿಂದಲೇ ಕೇಳಿಬರುತ್ತಿದೆ. ಇಂಥ ಹೊತ್ತಿನಲ್ಲಿ ಬೆಂಗಳೂರು ವಿವಿಯ ಕ್ಯಾಂಪಸ್‌ನಲ್ಲಿ ಕಾಂಡೋಮ್ ಮತ್ತು ಕವರ್‌ಗಳು ಪತ್ತೆಯಾಗಿವೆ.