Ad Widget .

ಬಿಜೆಪಿಗೆ ಚುನಾವಣೆ ಹೊತ್ತಲ್ಲಿ ನೆನಪಾದ ರಾಜಾಹುಲಿ| ಯಡಿಯೂರಪ್ಪ ಇಲ್ಲದೆ ರಾಜ್ಯ ಗೆಲ್ಲೋದು ಕಷ್ಟವಂತೆ! ನಳಿನ್ ಕುಮಾರ್, ಬೊಮ್ಮಾಯಿಯಿಂದ ಪವಾಡ ನಡೆಯಲ್ವಂತೆ!!

ಸಮಗ್ರ ನ್ಯೂಸ್: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ವರಿಷ್ಠರಿಗೆ ಮಾಜಿ ಸಿಎಂ ಯಡಿಯೂರಪ್ಪನವರು ನೆನಪಾಗಿದೆ. ರಾಜ್ಯದಲ್ಲಿ ಅಸೆಂಬ್ಲಿ‌ ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಅನಿವಾರ್ಯತೆ ಉದ್ಬವಿಸಿರುವುದಾಗಿ ಹೇಳಿಲಾಗ್ತಿದೆ. ಹಾಗಾಗಿಯೇ ಬಿಎಸ್ ವೈ ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುವ ಲೆಕ್ಕಾಚಾರಕ್ಕೆ ಹೈಕಮಾಂಡ್ ಬಂದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಸಿದ್ಧತೆಯೂ ಜೋರಾಗಿದೆ. ಆದರೆ ಆಂತರಿಕ ಸರ್ವೆಗಳಲ್ಲಿ ಬಿಜೆಪಿಗೆ ಹೆಚ್ಚಿನ ಸೀಟು ಗಳಿಸೋದು ಕಷ್ಟವೆಂಬ ರಿಸಲ್ಟ್ ಬರುತ್ತಿವೆ. ಇದು ದೆಹಲಿಯ ಕಮಲ ನಾಯಕರ ಆತಂಕಕ್ಕೆ ಕಾರಣವಾಗಿದೆ.

Ad Widget . Ad Widget . Ad Widget .

ಬಿಜೆಪಿಗೆ ತಾನು ಮಾಡಿಸಿರುವ ಮೂರು ಸರ್ವೆಗಳಲ್ಲೂ ಅದೇ ಫಲಿತಾಂಶ. ಪ್ರತಿಪಕ್ಷಗಳು, ಖಾಸಗಿ ಸಂಸ್ಥೆಗಳ ಸರ್ವೆಗಳಲ್ಲೂ ಕಡಿಮೆ ಸ್ಥಾನಗಳಿಸುವ ವರದಿಯಿಂದ ತಲೆ ಕೆಡಿಸಿಕೊಂಡಿದ್ದಾರೆ‌. ಕರ್ನಾಟಕದಲ್ಲಿ ಅಧಿಕಾರ ಹಿಡಿಯದೇ ಹೋದರೆ ದಕ್ಚಿಣ ಭಾರತದಲ್ಲಿ ಕಮಲ ಅರಳಿಸುವುದು ಕಷ್ಟ ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ. ಹೆಚ್ಚಿನ ಸೀಟು ಗೆಲ್ಲಲು ಯಡಿಯೂರಪ್ಪನವರ ನೇತೃತ್ವದಲ್ಲೇ ಹೋಗಬೇಕೆಂಬ ಚಿಂತನೆ ನಡೆದಿದೆ. ಹೀಗಾಗಿಯೇ ಯಡಿಯೂರಪ್ಪನವರಿಗೆ ಮತ್ತೆ ಮಣೆಹಾಕಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ.

ಯಡಿಯೂರಪ್ಪನವರಿಲ್ಲದೆ ಕರ್ನಾಟಕದ ಚುನಾವಣೆಯನ್ನ ಗೆಲ್ಲೋದು ಕಷ್ಟ. ನೀವು ಎಷ್ಟು ಪ್ರಯತ್ನ ಮಾಡಿದ್ರೂ 70 ಸೀಟು ಮೀರಿ‌ ಹೋಗೋಕೆ ಆಗಲ್ಲ. ಬಿಎಸ್ ವೈ ಇಲ್ಲದೆ ಹೋದ್ರೆ ಇನ್ನೂ ಕಷ್ಟ ಕಷ್ಟ ಎಂಬ ವರದಿ ಹೈಕಮಾಂಡ್ ಕೈ ಸೇರಿದೆ. ನಿನ್ನೆ ಶಿವಮೊಗ್ಗದ ‌ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿಯವರನ್ನು ಆಹ್ವಾನಿಸಲು ಬಿಎಸ್ ವೈ ದೆಹಲಿಗೆ ತೆರಳಿದ್ದು, ಈ ವೇಳೆ ಭೇಟಿ ವೇಳೆ ಪ್ರಧಾನಿ ಮಾಜಿ ಸಿಎಂ ಜೊತೆ ಸುಧೀರ್ಘವಾಗಿ ಚರ್ಚಿಸಿದ್ದಾರೆ. ರಾಜ್ಯ ರಾಜಕಾರಣ, ಪಕ್ಷದೊಳಗಿನ ಗೊಂದಲ, ಪ್ರತಿಪಕ್ಷಗಳ ಸಿದ್ಧತೆ ಎಲ್ಲವನ್ನೂ ಕೇಳಿದ್ದಾರೆ.

ಈ ವೇಳೆ ಪ್ರಧಾನಿ ಮಾಜಿ ಸಿಎಂಗೆ ಕೆಲವು ಸೂಚನೆಗಳನ್ನ ನೀಡಿದ್ದಾರೆ ಎನ್ನಲಾಗಿದೆ. ಪ್ರಸಕ್ತ ಚುನಾವಣೆಯನ್ನ ನಿಮ್ಮ ಮುಂಚೂಣಿಯಲ್ಲೇ ಮಾಡೋಣ. ಹೆಚ್ಚಿನ ಸ್ಥಾನಗಳನ್ನ ಗೆಲ್ಲೋಕೆ ಅಗತ್ಯವಾದ ಸಲಹೆಗಳನ್ನು ನೀವು ನಾಯಕರಿಗೆ ನೀಡಿ. ಅಧಿಕಾರ ಹಿಡಿಯುವ ತಂತ್ರಗಾರಿಕೆ ಬಗ್ಗೆ ಮುಕ್ತವಾಗಿ ಪಕ್ಷಕ್ಕೆ ನೀಡಿ ಎಂದು ಸೂಚಿಸಿದ್ದಾರೆ. ನಿಮ್ಮ ಮಾರ್ಗದರ್ಶನದಲ್ಲೇ ಚುನಾವಣೆಯನ್ನು ಎದುರಿಸೋಣವೆಂದು ಹೇಳಿದ್ದಾರೆ. ಅಲ್ಲದೆ ಪಕ್ಷದಲ್ಲಿ ಹೊಂದಾಣಿಕೆ, ಸಮನ್ವಯತೆ, ಚುನಾವಣೆ ತಂತ್ರಗಾರಿಕೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಲುವಂತೆ ಬಿಎಸ್ ವೈಗೆ ತಿಳಿಸಿದ್ದಾರೆನ್ನಲಾಗಿದೆ.

ಕರ್ನಾಟಕದಲ್ಲಿ ಸರ್ಕಾರದ ವಿರುದ್ಧ ನಿರಂತರ ಆರೋಪಗಳು ಎದುರಾಗಿವೆ. ಪಿಎಸ್‌ಐ ಸ್ಕ್ಯಾಂ, ಉಪನ್ಯಾಸಕರ ಹಗರಣ, ಚಿಲುಮೆ ಸಂಸ್ಥೆ ಡಾಟಾ ಪ್ರಕರಣ, ಸಹಕಾರ ಇಲಾಖೆ ನೇಮಕಾತಿ ಅಕ್ರಮ, ಲೋಕೋಪಯೋಗಿ ಇಲಾಖೆಯಲ್ಲಿ‌ ಅಕ್ರಮ ವರ್ಗಾವಣೆ ಆರೋಪಗಳು ಸರ್ಕಾರವನ್ನ ಹಣ್ಣುಗಾಯಿ ನೀರು ಗಾಯಿ ಮಾಡಿವೆ.. 40% ಕಮೀಷನ್ ಆರೋಪ ಮುಗಿಯೋ ಲಕ್ಷಣಗಳು ಕಾಣುತ್ತಿಲ್ಲ. ತಾವೇ ಎತ್ತಿಬಿಟ್ಟ ಪಂಚಮಸಾಲಿ ಮೀಸಲಾತಿ ಹೋರಾಟ ಇವತ್ತು ತಮ್ಮ ಬುಡಕ್ಕೇ ಬಂದು ನಿಂತಿದ್ದು ಒಳಮೀಸಲಾತಿಯ ಕೂಗು ಎಲ್ಲವೂ ತಮ್ಮ ಕಡೆಯೇ ತಿರುಗಿಬಿದ್ದಿವೆ. ಪ್ರತಿಪಕ್ಷಗಳು ತಮ್ಮದೇ ಲಿಂಗಾಯತ ಮತ ಸೆಳೆಯುವ ಪ್ರಯತ್ನ ಮಾಡ್ತಿರೋದು ನುಂಗಲಾರದ ತುತ್ತಾಗಿದೆ. ಹೀಗಾಗಿ ಯಡಿಯೂರಪ್ಪ ಅನಿವಾರ್ಯತೆ ವರಿಷ್ಠರಿಗೆ ಎದುರಾಗಿದೆ..

ಒಟ್ನಲ್ಲಿ ಬಿಜೆಪಿ ವರಿಷ್ಠರಿಗೆ ರಾಜಾಹುಲಿಯ ನೆನಪಾಗಿದೆ. ಕರ್ನಾಟಕದಲ್ಲಿ ನಿರಂತರವಾಗಿ ಸರ್ಕಾರದ ವಿರುದ್ಧ ಆರೋಪಗಳು ಕೇಳಿ ಬರ್ತಿರೋದ್ರಿಂದ ಸರ್ಕಾರ ಮತ್ತೆ ಅಸ್ಥಿತ್ವಕ್ಕೆ ಬರುವುದು ಕಷ್ಟ. ಪಕ್ಷದಲ್ಲೂ ಸಮರ್ಥ ನಾಯಕತ್ವ ಇಲ್ಲ‌. ಯಡಿಯೂರಪ್ಪನವರನ್ನ ಇಟ್ಕೊಂಡೇ ಚುನಾವಣೆ ಎದುರಿಸಬೇಕು. ಹಾಗಾದಾಗ ಮಾತ್ರ ನಾವು ಹೆಚ್ಚು ಸೀಟು ಗೆಲ್ಲೋಕೆ ಸಾಧ್ಯ ಅನ್ನೋ ನಿರ್ಧಾರಕ್ಕೆ ಬಂದಂತಿದೆ. ಹೀಗಾಗಿ ಯಡಿಯೂರಪ್ಪಗೆ ಮಣೆಹಾಕಲು ಹೊರಟಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *