Ad Widget .

ಮಹಾತ್ಮ ಗಾಂಧಿ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಏಳು ವರ್ಷ ಜೈಲು ಶಿಕ್ಷೆ

ದಕ್ಷಿಣ ಆಫ್ರಿಕಾ: ವಂಚನೆ ಆರೋಪ ಎದುರಿಸುತ್ತಿದ್ದ ಮಹಾತ್ಮ ಗಾಂಧೀಜಿ ಮರಿಮೊಮ್ಮಗಳು ಒಬ್ಬರಿಗೆ ದಕ್ಷಿಣ ಆಫ್ರಿಕಾ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಗಾಂಧೀಜಿ ಮೊಮ್ಮೊಗಳಾದ ಇಳಾ ಗಾಂಧಿ ಹಾಗೂ ಮೆವಾ ರಾಮ್​ಗೋವಿಂದ್ ಅವರ ಮಗಳಾದ ಆಶೀಶ್ ಲತಾ ವಿರುದ್ಧ ಉದ್ಯಮಿಯೊಬ್ಬರಿಗೆ ಹಣ ವಂಚನೆ ಪ್ರಕರಣ ದಕ್ಷಿಣ ಆಫ್ರಿಕಾದಲ್ಲಿ 2015ರಲ್ಲಿ ದಾಖಲಾಗಿತ್ತು. ಉದ್ಯಮಿ ಎಸ್​ ಆರ್ ಮಹಾರಾಜ್​ ಎನ್ನುವವರಿಂದ 6.2 ಮಿಲಿಯನ್ ರಾಂಡ್ ಪಡೆದಿದ್ದ ಆಶೀಶ್ ಲತಾ ನಂತರ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ, ಅವರು ಹಣ ಯಾವ ಕಾರಣಕ್ಕೆ ಅವಶ್ಯಕವಿದೆ ಎಂದು ಹೇಳಿದ್ದರೋ ಅದು ಕೂಡಾ ಸುಳ್ಳು ಎಂದು ಸಾಬೀತಾಗಿದ್ದು ಆಶೀಶ್​ ಲತಾ ತೋರಿಸಿದ್ದ ದಾಖಲೆಗಳೆಲ್ಲವೂ ನಕಲಿ ಎನ್ನುವುದು ತಿಳಿದುಬಂದಿದೆ. ವಿಚಾರಣೆ ವೇಳೆ ಆಶೀಶ್ ಲತಾ ತಪ್ಪಿತಸ್ಥೆ ಎನ್ನುವುದು ಕಂಡು ಬಂದ ಕಾರಣ ಇದೀಗ ದಕ್ಷಿಣ ಆಫ್ರಿಕಾದ ಡರ್ಬನ್​ ನ್ಯಾಯಾಲಯ ಏಳು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಕುಟುಂಬದ ಹಿರಿತನ, ನಂಬಿಕೆಗಳನ್ನೇ ಬಂಡವಾಳವಾಗಿಸಿಕೊಂಡು ಮೋಸವೆಸಗಿದ ಆಶೀಶ್​ ಲತಾ ಅವರು ಕಾನೂನಿನ ಅಡಿಯಲ್ಲಿ ಅಪರಾಧಿ ಎನ್ನುವುದು ಸಾಬೀತಾದಂತಾಗಿದೆ.

Ad Widget . Ad Widget . Ad Widget .

Leave a Comment

Your email address will not be published. Required fields are marked *