ಸಮಗ್ರ ನ್ಯೂಸ್: ಪರವಾನಗಿ ಹೊಂದಿದ ಬಂದೂಕನ್ನು ಠಾಣೆಯಲ್ಲಿ ಇರಿಸುವಂತಿಲ್ಲವೆಂದು ಕೇರಳ ಹೈಕೋರ್ಟ್ ಮತ್ತೊಮ್ಮೆ ಮಹತ್ವದ ತೀರ್ಪು ನೀಡಿದೆ.
ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ನಂತರ ಬದಿಯಡ್ಕ ಉಕ್ಕಿನಡ್ಕ ಸಮೀಪದ ಕೃಷಿಕ ಏನಂಕೂಡ್ಲು ಸುಬ್ರಹ್ಮಣ್ಯ ಅವರು ತಮ್ಮ ಕೋವಿಯನ ಪಡೆಯಲು ಬದಿಯಡ್ಕ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಅವರು ಕೋವಿಯನ್ನು ಹಿಂತಿರುಗಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ರಾಜ್ಯ ಹೈಕೋರ್ಟ್‌ನ ಮೊರೆಹೋಗಿದ್ದರು. ಅವರ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಮೇಲಿನ ಆದೇಶವನ್ನೇ ನೀಡಿದೆ.
ಚುನಾವಣೆಯ ಸಂದರ್ಭದಲ್ಲಿ ಪರವಾನಗಿ ಹೊಂದಿದ ಬಂದೂಕನ್ನು ಠಾಣೆಯಲ್ಲಿ ಶೇಖರಿಸಿಡುವ ಅಧಿಕಾರ ಪೊಲೀಸರಿಗಿಲ್ಲ, ಕ್ರಿಮಿನಲ್ ಕೇಸುಗಳಲ್ಲಿ ಭಾಗಿಯಾಗಿರುವ ಪರವಾನಗಿದಾರರ
ಕೋವಿಗಳನ್ನು ಮಾತ್ರವೇ ಸುಸಜ್ಜಿತ ಚುನಾವಣೆ ನಡೆಸುವ ಸಲುವಾಗಿ ಶೇಖರಿಸಲು ಅನುಮತಿ ಇದೆ ಎಂದು ಹೈಕೋರ್ಟ್ ಪುನಃ ಸ್ಪಷ್ಟಪಡಿಸಿದೆ.
ಕೇರಳ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ಕಾಸರಗೋಡಿನ ಯುವ ವಕೀಲ ಪ್ರದೀಪ್ ರಾವ್ ಮೇಲ್ನೋಡು ಅವರು ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು ಸಲ್ಲಿಸಿದ್ದು ಅರ್ಜಿದಾರರು ಪರವಾಗಿ ಹೈಕೋರ್ಟ್ ತೀರ್ಪು ನೀಡಿತ್ತು ಎಂಬುದು ಗಮನಾರ್ಹ. ಅವರ ಸಲಹೆಯನ್ನು ಪಡೆದು ಸುಬ್ರಹ್ಮಣ್ಯ ಏನಂಕೂಡ್ಲು ಅವರು ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.