Ad Widget .

ನಾಮಪತ್ರ ಹಿಂಪಡೆಯಲು ಹಣದ ಆಮೀಷ ಆರೋಪ | ಕೆ.ಸುರೇಂದ್ರನ್ ವಿರುದ್ಧ ಕೇಸು ದಾಖಲಿಸಲು ಕೋರ್ಟ್ ಅನುಮತಿ

ಕಾಸರಗೋಡು: ಕೇರಳ ವಿಧಾನಸಭೆಗೆ ಕಳೆದ ಏಪ್ರಿಲ್ ನಲ್ಲಿ ಚುನಾವಣೆ ನಡೆದು ಮೇ ತಿಂಗಳಲ್ಲಿ ಫಲಿತಾಂಶ ಹೊರಬಂದಿತ್ತು. ವಿಧಾನಸಭಾ ಚುನಾವಣೆ ವೇಳೆ ಹಣ ಹಾಗೂ ಆಮಿಷ ನೀಡಿ ನಾಮಪತ್ರ ಹಿಂತೆಗೆಯಲು ಅನ್ಯ ಪಕ್ಷದ ಅಭ್ಯರ್ಥಿ ಓರ್ವರಿಗೆ ಒತ್ತಡ ಹೇರಿದ ಆರೋಪದ ಮೇಲೆ ಸುರೇಂದ್ರನ್ ಅವರ ಮೇಲೆ ಕೇಸು ದಾಖಲಿಸಿ ಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಎಸ್ ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರರವರ ಹೇಳಿಕೆ ಹಿನ್ನಲೆಯಲ್ಲಿ, ಎಲ್ ಡಿ ಎಫ್ ಅಭ್ಯರ್ಥಿಯಾಗಿದ್ದ ರಮೇಶನ್ ನೀಡಿದ ದೂರಿನನ್ವಯ ಇದೀಗ ಬಿಜೆಪಿ ಕೇರಳ ರಾಜ್ಯ ಘಟಕ ಅಧ್ಯಕ್ಷ ಹಾಗೂ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರನ್ ವಿರುದ್ಧ ಮೊಕದ್ದಮೆ ದಾಖಲಿಸಲು ಕಾಸರಗೋಡು ಜಿಲ್ಲಾ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.

Ad Widget . Ad Widget . Ad Widget .

ಆದಿತ್ಯವಾರ ಸುಂದರರವರನ್ನು ಠಾಣೆಗೆ ಕರೆಸಿ ಮಾಹಿತಿ ಕಲೆ ಹಾಕಿಕೊಳ್ಳಲಾಗಿತ್ತು. ಆದರೆ ಸುರೇಂದ್ರನ್ ವಿರುದ್ಧ ಕೇಸು ದಾಖಲಿಸಿಕೊಳ್ಳಲು ನ್ಯಾಯಾಲಯದ ಅನುಮತಿ ಅಗತ್ಯ ಇತ್ತು. ಈ ಹಿನ್ನಲೆಯಲ್ಲಿ ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಪೊಲೀಸರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು . ಈ ಹಿನ್ನಲೆಯಲ್ಲಿ ವಿ.ವಿ ರಮೇಶನ್ ನ್ಯಾಯಾಲಯ ಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಈ ಆದೇಶ ನೀಡಿದೆ.

Leave a Comment

Your email address will not be published. Required fields are marked *