ಸಮಗ್ರ ನ್ಯೂಸ್: ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಉತ್ಪಾದಿಸಿ ಗ್ರಾಹಕರನ್ನು ಆಕರ್ಷಿಸಬೇಕು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕಿವಿಮಾತು ಹೇಳಿದರು.
ಮೈಸೂರಿನಲ್ಲಿ ಭಾನುವಾರ ರೀಡ್ ಅಂಡ್ ಟೇಲರ್ ರಜನ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ಕೃಷ್ಟ ದರ್ಜೆಯ ಉತ್ಪನ್ನಗಳನ್ನು ಉತ್ಪಾದಿಸಿದಷ್ಟು ಗ್ರಾಹಕರಿಗೆ ಅನುಕೂಲವಾಗುತ್ತದೆ.
ಹೊಸ ಹೊಸ ವಿನ್ಯಾಸದ ಬಟ್ಟೆ ಉತ್ಪಾದಿಸಬೇಕು. ಆಗ ಗ್ರಾಹಕರು ಆಕರ್ಷಿತರಾಗುತ್ತಾರೆ ಎಂದರು.
ಜೋಸೆಫ್ ಟಾಯ್ಲರ್ ಎಂಬವರಿಂದ ಬ್ರಾಂಡ್ 1830ರಲ್ಲಿ ಆರಂಭವಾಯಿತು. ನಂತರ, 1998ರಲ್ಲಿ ಭಾರತ ದೇಶದಲ್ಲಿ ಆರಂಭವಾಯಿತು. ಮೈಸೂರಿನಲ್ಲಿ ರೀಡ್ ಅಂಡ್ ಟೇಲರ್ ಆರಂಭವಾಗಿ 25 ವರ್ಷಗಳನ್ನು ಪೂರೈಸಿದೆ. ಈ ಕಂಪನಿಯು ಹಲವಾರು ಏಳು-ಬೀಳು ಕಂಡು ಪ್ರಗತಿ ಸಾಧಿಸಿದೆ ಎಂದರು.
ಉತ್ಕೃಷ್ಟ ಉತ್ಪನ್ನಗಳನ್ನು ತಯಾರಿಸುವ ಮೂಲಕ ಗ್ರಾಹಕರ ಆಕರ್ಷಣೆಗೆ ತಕ್ಕಂತೆ ಒದಗಿಸಿದರೆ ಉತ್ತಮ. ಹೊಸ ಶೈಲಿಯ ಗುಣಮಟ್ಟದ ಶೂಟಿಂಗ್ ಶರ್ಚ್‌ಗಳನ್ನು ನೀಡಿದರೆ ಆಕರ್ಷಿಸಬಹುದು ಎಂದರು.