ಸಮಗ್ರ ನ್ಯೂಸ್: ಕಾಂತಾರ ಚಿತ್ರದಲ್ಲಿ ‘ಭೂತ ಕೋಲ’ದ ವಿರುದ್ಧ ನಡೆದವನ ಪಾತ್ರಧಾರಿ ರಕ್ತಕಾರಿ ಸಾಯುವ ದೃಶ್ಯ ಎಲ್ಲರನ್ನೂ ಕಾಡುತ್ತದೆ. ಚಿತ್ರದಲ್ಲಿ ಬರುವ ಈ ದೃಶ್ಯ ರೀಲ್, ಆದರೆ ಉಡುಪಿಯ ಪಡುಬಿದ್ರೆ ತಾಲೂಕಿನ ಪಡುಹಿತ್ಲು ಬಳಿ ರಿಯಲ್ ಆಗಿ ಇಂತಹ ಘಟನೆಯೊಂದು ನಡೆದಿದ್ದು, ಇದು ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಮತ್ತೊಮ್ಮೆ ತುಳುನಾಡಿನ ದೈವಾರಾಧನೆ ಮುನ್ನೆಲೆಗೆ ಬಂದಿದೆ.
ಉಡುಪಿ ಜಿಲ್ಲೆಯ ಪಡುಹಿತ್ಲು ಜಾರಂದಾಯ ದೈವಸ್ಥಾನದ ದೈವಕೋಲದ ವಿಚಾರದಲ್ಲಿ ಸ್ಥಳೀಯ ಎರಡು ಗುಂಪುಗಳ ಮಧ್ಯೆ ತಗಾದೆ ಇತ್ತು ಎನ್ನಲಾಗಿದೆ. ಸುಮಾರು 500 ವರ್ಷಗಳ ಇತಿಹಾಸವಿರುವ ಈ ದೈವಸ್ಥಾನಕ್ಕೆ ‘ಪಡುಹಿತ್ಲು ಜಾರಂದಾಯ ಸೇವಾ ಸಮಿತಿ’ಯನ್ನು ರಚನೆ ಮಾಡಲಾಗಿತ್ತು. ಕಳೆದ 15 ವರ್ಷಗಳಿಂದ ಇದು ಕೆಲಸ ಮಾಡಿಕೊಂಡು ಬರುತ್ತಿತ್ತು ಎನ್ನಲಾಗಿದೆ.
ಆದರೆ ಸಮಿತಿಯ ವಿರೋಧಿ ಬಣವೊಂದು ಕಳೆದ ಡಿಸೆಂಬರ್ನಲ್ಲಿ ಟ್ರಸ್ಟ್ ಒಂದನ್ನು ರಚಿಸಿತ್ತು. ಸಮಿತಿಯ ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ಟ್ರಸ್ಟ್ ರಚನೆಯಾಗಿತ್ತು. ವರದಿಗಳ ಪ್ರಕಾರ ‘ಜರಂದಾಯ ದೈವ’ದ ಕುಟುಂಬಕ್ಕೆ ಸೇರಿದ ಜಯ ಪೂಜಾರಿಯನ್ನು ಮುಂದಿಟ್ಟುಕೊಂಡು ಪ್ರಕಾಶ್ ಶೆಟ್ಟಿ ಟ್ರಸ್ಟ್ ರಚಿಸಿದ್ದರು. ಟ್ರಸ್ಟ್ ರಚನೆ ಬಳಿಕ ಹಿಂದಿನ ಸಮಿತಿಯನ್ನು ಪ್ರಕಾಶ್ ಶೆಟ್ಟಿ ನೇತೃತ್ವದ ತಂಡ ವಿಸರ್ಜನೆ ಮಾಡಿತ್ತು. ಇದು ಹಿಂದಿನ ಸಮಿತಿ ಸದಸ್ಯರ ವಿರೋಧಕ್ಕೆ ಕಾರಣವಾಗಿತ್ತಂತೆ.
ಇದೇ ಕಾರಣಕ್ಕೆ ಟ್ರಸ್ಟ್ನವರು ಕೋರ್ಟ್ ಮೊರೆ ಹೋಗಿ, ಹಳೇ ಸಮೀತಿ ಸದಸ್ಯರು ಯಾವುದೇ ಕಾರಣಕ್ಕೂ ನಮ್ಮ ಆಡಳಿತದ ವಿಚಾರದಲ್ಲಿ ಮೂಗು ತೋರಿಸಬಾರದು ಎಂದು ಕೋರ್ಟ್ ಮೊರೆ ಹೋಗಿತ್ತು. ಅಂತೆಯೇ ಪ್ರಕಾಶ್ ಶೆಟ್ಟಿ ಮತ್ತು ಜಯಾ ಪೂಜಾರಿ ನೇತೃತ್ವದ ಟ್ರಸ್ಟ್ ಡಿಸೆಂಬರ್ 23 ರಂದು ಕೋರ್ಟ್ನಿಂದ ತಡೆ ಕೂಡ ತಂದಿತ್ತು. ಡಿಸೆಂಬರ್ 23 ರಂದು ಕೋರ್ಟ್ನಿಂದ ಸ್ಟೇ ತಂದ, ಪ್ರಕಾಶ್ ಶೆಟ್ಟಿ ತಂಡವು ಡಿಸೆಂಬರ್ 24ರಂದು ಪಕ್ಕದ ಕೊಡಮಣಿತ್ತಾಯ ದೈವಕೋಲಕ್ಕೆ ಹೋಗಿತ್ತು. ಜಯ ಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ ಅಲ್ಲಿನ ದೈವಕೋಲಕ್ಕೆ ಹೋಗಿ, ತಮ್ಮ ಟ್ರಸ್ಟ್ ವಿಚಾರ ಪ್ರಸ್ತಾಪಿಸುವ ನಿರ್ಧಾರದಲ್ಲಿದ್ದರು. ಆದರೆ, ಅಷ್ಟೊತ್ತಿಗಾಗಲೇ ಜಯ ಪೂಜಾರಿ ಕೋಲದ ಸಂದರ್ಭದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಡಿಸೆಂಬರ್ 24 ರಂದು ನಡೆದ ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಪ್ರಕಾಶ್ ಶೆಟ್ಟಿ ಮತ್ತು ಜಯ ಪೂಜಾರಿ ತಂಡ ದೈವ ನರ್ತಕರಿಗೆ ಕಿರುಕುಳ ಕೂಡ ನೀಡುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ತಮ್ಮ ಪರವಾಗಿ ದೈವ ನುಡಿಯುವಂತೆ ಒತ್ತಡ ಹೇರಿದ್ದರು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಜಯಾ ಪೂಜಾರಿಯನ್ನು ಬಲಿ ಪಡೆಯಲಾಗಿದೆ ಎನ್ನಲಾಗುತ್ತಿದೆ. ಹಳೆ ಸಮಿತಿಯನ್ನು ವಿಸರ್ಜಿಸಿರೋದು ದೇವರಿಗೆ ಇಷ್ಟ ಆಗಲಿಲ್ಲ. ದೇವರ ಮತ್ತು ಭಕ್ತರ ವಿರುದ್ಧ ನಡೆದುಕೊಂಡ ಜಯ ಪೂಜಾರಿಯನ್ನು ದೈವ ಬಲಿ ಪಡೆದುಕೊಂಡಿದೆ ಎಂಬ ಚರ್ಚೆಗಳು ತುಳುನಾಡಿನಲ್ಲಿ ಭಾರೀ ಚರ್ಚೆ ಆಗುತ್ತಿದೆ.
ಜಯಾ ಪೂಜಾರಿ ಜರಂದಾಯ ದೈವದ ಕುಟುಂಬಕ್ಕೆ ಸೇರಿದ್ದರು. ನೂರಾರು ವರ್ಷದ ಇತಿಹಾಸವಿರುವ ಜಾರಂದಾಯ ದೈವದ ಮನೆಯಲ್ಲಿ, ಇವರ ಕುಟುಂಬಸ್ಥರು ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. 15 ವರ್ಷಗಳಿಂದ ಪಡುಹಿತ್ಲು ‘ಜಾರಂದಾಯ ಸೇವಾ ಸಮಿತಿ’ ರಚನೆ ಆಗಿತ್ತು.