ಸಮಗ್ರ ನ್ಯೂಸ್: ಪಂಚಮಸಾಲಿ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿದೆ. ಪ್ರಬಲ ಸಮುದಾಯಗಳ ಸತತ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಇದೀಗ ಪಂಚಮಸಾಲಿ, ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯಕ್ಕೆ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಕುರಿತು ಸಭೆ ಸೇರಿದ ಸಚಿವ ಸಂಪುಟ, ಮಹತ್ವದ ನಿರ್ಧಾರ ಘೋಷಿಸಿದೆ.
ಪಂಚಮಸಾಲಿ ಸಮುದಾಯಕ್ಕೆ 2ಸಿ ಅಡಿ ಮೀಸಲಾತಿ ನೀಡಲಾಗಿದೆ. ಇನ್ನು ಒಕ್ಕಲಿಗೆ ಸಮುದಾಯಕ್ಕೆ ಹೊಸ ಪ್ರವರ್ಗ ಸೃಷ್ಟಿಸಲಾಗಿದೆ. ಒಕ್ಕಲಿಗ ಸಮುದಾಯಕ್ಕೆ 2ಸಿ ಅಡಿಯಲ್ಲಿ ಮೀಸಲಾತಿ ನೀಡಲು ಸಚಿವ ಸಂಪುಟಕ್ಕೆ ಒಪ್ಪಿಗೆ ನೀಡಿದೆ. ಲಿಂಗಾಯಿತ ಸಮುದಾಯಕ್ಕೆ 3ಬಿಯಲ್ಲಿರುವ ಮೀಸಲಾತಿಯನ್ನು 2ಡಿ ಅಡಿಯಲ್ಲಿ ನೀಡಲು ಒಪ್ಪಿಗೆ ಸೂಚಿಸಿದೆ. 3ಬಿಯಲ್ಲಿದ್ದ ಲಿಂಗಾಯಿತರಿಗೆ 2ಡಿ ಅಡಿಯಲ್ಲಿ ಮೀಸಲಾತಿ ಘೋಷಿಸಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಮಾಧುಸ್ವಾಮಿ ಮೀಸಲಾತಿ ಸಿಹಿ ಸುದ್ದಿ ನೀಡಿದ್ದಾರೆ. ಹಿಂದುಳಿದ ವರ್ಗದ ಅಯೋಗ ಮಧ್ಯಂತರ ವರದಿ ನೀಡಿದೆ. ಹೊಸದಾಗಿ ಎರಡು ಪ್ರವರ್ಗಗಳನ್ನು ಸೃಷ್ಟಿಸಲಾಗಿದೆ. 2c ಮತ್ತು 2d ಪ್ರ ವರ್ಗ ಹೊಸದಾಗಿ ಸೇರ್ಪಡೆಗೊಂಡಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮೀಸಲಾಗಿದ್ದ ಶೇಕಡಾ 10ರಷ್ಟು ಮೀಸಲಾತಿಯನ್ನು ಶೇಕಡಾ 3ಕ್ಕೆ ಇಳಿಕೆ ಮಾಡಲಾಗಿದೆ. ಶೇಕಡಾ 7 ರಷ್ಟು ಮೀಸಲಾತಿಯನ್ನು 2ಡಿ ಹಾಗೂ 2ಸಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ. ಬ್ರಾಹ್ಮಣರು ಸೇರಿದಂತೆ ಎಲ್ಲಾ ಮೇಲ್ವರ್ಗದಲ್ಲಿನ ಆರ್ಥಿಕ ಹಿಂದುಗಳಿದ ವರ್ಗಗಳ ಮೀಸಲಾತಿಗೆ ಕತ್ತರಿ ಹಾಕಲಾಗಿದೆ.
3 B ನಲ್ಲಿದ್ದ ಸಮುದಾಯಗಳನ್ನು 2c ಗೆ ಮತ್ತು 2dಗೆ ಸೇರಿಸಲಾಗಿದೆ. ಇದರಡಿ ಯಾವ ಸಮುದಾಯಗಳು ಬರಲಿದೆ ಅನ್ನೋದನ್ನು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಹಿಂದುಳಿದ ಆಯೋಗ ಅಂತಿಮ ವರದಿ ನೀಡಿದ ಬಳಿಕ ಯಾರಿಗೆ ಎಷ್ಟು ಪ್ರಮಾಣದ ಮೀಸಲಾತಿ ನಿರ್ಧರಿಸಲಾಗುವುದು ಎಂದು ಮಾಧುಸ್ವಾಮಿ ಹೇಳಿದ್ದಾರೆ.