ಸಮಗ್ರ ನ್ಯೂಸ್: ಎಲ್ಲಾ ವಯಸ್ಸಿನ ಜನರು ಸ್ಥೂಲಕಾಯ ಸಮಸ್ಯೆ ಎದುರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊಬ್ಬನ್ನು ಕಡಿಮೆ ಮಾಡಲು ಹಲವು ವಿಷಯಗಳತ್ತ ಗಮನ ಹರಿಸುವುದು ಮುಖ್ಯ. ಅದರಲ್ಲೂ ಆಹಾರ ಪದ್ಧತಿ ಚೆನ್ನಾಗಿ ಇಟ್ಟುಕೊಳ್ಳುವುದು, ಉತ್ತಮ ಜೀವನಶೈಲಿ ಫಾಲೋ ಮಾಡುವುದು ತೂಕ ಇಳಿಕೆಗೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಬೊಜ್ಜು ತೊಡೆದು ಹಾಕಲು ಸರಳ ಸಲಹೆಗಳು ಹೀಗಿವೆ:
ಬೊಜ್ಜು ಸಮಸ್ಯೆ ತೊಡೆದು ಹಾಕಲು ನಿಯಮಿತವಾಗಿ ಕೆಲವು ಪರಿಹಾರ ಕ್ರಮಗಳನ್ನು ಫಾಲೋ ಮಾಡುವುದು, ಅವುಗಳನ್ನು ಜೀವನಶೈಲಿಯ ಭಾಗವಾಗಿ ಮಾಡಿಕೊಂಡರೆ ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ವಿಶೇಷ ರೀತಿಯ ನೀರನ್ನು ತಯಾರಿಸಿ ಸೇವಿಸಿ ಬೊಜ್ಜು ತೊಡೆದು ಹಾಕಬಹುದು. ಈ ಟಿಪ್ಸ್ ಫಾಲೋ ಮಾಡಿದ್ರೆ ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಬಹುದು. ಹಾಗೂ ದೇಹವನ್ನು ಡಿಟಾಕ್ಸ್ ಮಾಡವುದು, ಬೊಜ್ಜು ಕರಗಿಸಲು ಹಾಗೂ ಹಲವು ರೋಗಗಳಿಂದ ಕಾಪಾಡಬಹುದು.
೧) ದಾಲ್ಚಿನ್ನಿ ಮತ್ತು ಜೇನುತುಪ್ಪ:
ಔಷಧೀಯ ಗುಣಗಳಿಂದ ಸಮೃದ್ಧ ದಾಲ್ಚಿನ್ನಿ, ತೂಕ ನಷ್ಟಕ್ಕೆ ಸಾಕಷ್ಟು ಸಹಕಾರಿ ಆಗಿದೆ. ದಾಲ್ಚಿನ್ನಿಯನ್ನು ನೀರಿನಲ್ಲಿ ಬೆರೆಸಿ ಕುಡಿದರೆ ಬೊಜ್ಜು ಕಡಿಮೆ ಆಗುತ್ತದೆ. ರೋಗಗಳಿಂದ ರಕ್ಷಣೆ ಸಿಗುತ್ತದೆ. ದಾಲ್ಚಿನ್ನಿ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ದಾಲ್ಚಿನ್ನಿಯನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ, ನಂತರ ಉಗುರು ಬೆಚ್ಚಗಾದ ನಂತರ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿದರೆ ಕೊಬ್ಬು ಕ್ರಮೇಣ ಕಡಿಮೆಯಾಗುತ್ತದೆ.
೨) ಅಜ್ವಾಯಿನ್ ನೀರು:
ಅಜ್ವಾಯಿನ್ ಫೈಬರ್ ಮತ್ತು ಅನೇಕ ಖನಿಜಗಳಿಂದ ಕೂಡಿದೆ. ಇದು ದೇಹವನ್ನು ಅನೇಕ ಕಾಲೋಚಿತ ರೋಗಗಳಿಂದ ರಕ್ಷಣೆ ಮಾಡುತ್ತದೆ. ಅಜವೈನ್ ಅನ್ನು ಉಪ್ಪಿನೊಂದಿಗೆ ಬೆರೆಸಿ ಕುಡಿಯುತ್ತಾರೆ. ಸೆಲರಿಯನ್ನು ನೀರಿನೊಂದಿಗೆ ಬೆರೆಸಿ ಕುಡಿದರೆ ಬೊಜ್ಜು ಕರಗಿಸಲು ಸಹಕಾರಿ.
ಎರಡರಿಂದ ಮೂರು ಸ್ಪೂನ್ ಅಜ್ವಾಯಿನ್ ನ್ನು ನೀರಿನ ಬಾಟಲಿಯಲ್ಲಿ ಹಾಕಿ ರಾತ್ರಿಯಿಡಿ ನೆನೆಸಿಡಿ. ಬೆಳಗ್ಗೆ ಸೆಲರಿ ಜೊತೆಗೆ ನೀರನ್ನು ಕುದಿಸಿ, ತಣ್ಣಗಾಗಿಸಿ ಮತ್ತು ನೀರನ್ನು ಕುಡಿಯಿರಿ. ಇದನ್ನು ಹಗಲಿನಲ್ಲಿ ಯಾವಾಗ ಬೇಕಾದ್ರೂ ಕುಡಿಯಬಹುದು. ಬೇಸಿಗೆಯಲ್ಲಿ ಹೆಚ್ಚು ಅಜ್ವೈನ್ ನೀರು ದೇಹಕ್ಕೆ ಹಾನಿ ಮಾಡುತ್ತದೆ ನೆನಪಿಡಿ.
೩) ಕಿತ್ತಳೆ, ಅರಿಶಿನ ಮತ್ತು ತುಳಸಿ ನೀರು:
ಚಳಿಗಾಲದಲ್ಲಿ ದೇಹಕ್ಕೆ ಆರೋಗ್ಯ ನೀಡಲು ಮತ್ತು ಬೊಜ್ಜು ಕರಗಿಸಲು ಕಿತ್ತಳೆ, ಅರಿಶಿನ ಮತ್ತು ತುಳಸಿ ನೀರು ಸಹಕಾರಿ ಆಗಿದೆ. ಕಿತ್ತಳೆಯನ್ನು ಎರಡು ಹೋಳುಗಳಾಗಿ ಕತ್ತರಿಸಿ, ಒಂದು ಟೀಚಮಚ ಅರಿಶಿನ ಮತ್ತು 6 ತುಳಸಿ ಎಲೆ ಈ ಎಲ್ಲಾ ವಸ್ತುಗಳನ್ನು ರಾತ್ರಿಯಿಡೀ ನೀರಿಗೆ ಹಾಕಿ ನೆನೆಸಿಟ್ಟು ಬೆಳಗ್ಗೆ ಈ ನೀರು ಕುಡಿಯಿರಿ.
೪) ಕಲ್ಲುಪ್ಪು:
ಅನೇಕ ವಿಧದ ಖನಿಜಗಳಿಂದ ಕಲ್ಲುಪ್ಪು ಸಮೃದ್ಧವಾಗಿದೆ. ಇದು ಜೀರ್ಣಕಾರಿ ಸಮಸ್ಯೆ ಹೋಗಲಾಡಿಸಲು ತುಂಬಾ ಪ್ರಯೋಜನಕಾರಿ. ಬಿಸಿ ನೀರಿಗೆ ಕಲ್ಲು ಉಪ್ಪನ್ನು ಬೆರೆಸಿ ಕುಡಿದರೆ ಕೊಬ್ಬಿನ ಸಮಸ್ಯೆ ಕಡಿಮೆ ಆಗುತ್ತದೆ. ಆಹಾರದಲ್ಲಿ ಕಲ್ಲುಪ್ಪನ್ನು ಬಳಸಿದರೆ ಸಾಕಷ್ಟು ಪ್ರಯೋಜನ ಸಿಗುತ್ತದೆ.
೫) ನಿಂಬೆ, ಪೇರಳೆ ಮತ್ತು ಶುಂಠಿ ನೀರು:
ಅರ್ಧ ನಿಂಬೆಹಣ್ಣು, ಒಂದು ಇಂಚು ಕತ್ತರಿಸಿದ ಶುಂಠಿ ಮತ್ತು ಅರ್ಧ ಪೇರಳೆ ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ಎಲ್ಲಾ ಪದಾರ್ಥಗಳನ್ನು ನೀರಿನಲ್ಲಿ 12 ಗಂಟೆ ನೆನೆಸಿಟ್ಟು ಸೇವಿಸಿ. ಆರೋಗ್ಯಕರ ನೀರಿನ ಪಾಕವಿಧಾನ ಬೊಜ್ಜು ಸಮಸ್ಯೆ ಬಗೆಹರಿಸುತ್ತದೆ.
೬) ಕರಿಬೇವು:
ಇಪ್ಪತ್ತು ಕರಿಬೇವಿನ ಎಲೆ ತೆಗೆದುಕೊಂಡು ಚೆನ್ನಾಗಿ ತೊಳೆದು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯಿರಿ. ದಿನದಲ್ಲಿ ಯಾವಾಗ ಬೇಕಾದ್ರೂ ಸೇವಿಸಬಹುದು. ನಿಯಮಿತವಾಗಿ ವಾರಕ್ಕೆ ಎರಡು ಬಾರಿ ಕುಡಿದರೆ ಬೊಜ್ಜಿನ ಸಮಸ್ಯೆ ಕಡಿಮೆ ಆಗುತ್ತದೆ.