ಬೆಂಗಳೂರು ಕನ್ನಡದ ಬಾವುಟ ಹಾಗು ಲಾಂಛನವುಳ್ಳ ಬಿಕಿನಿಯನ್ನು ಮಾರಾಟಕ್ಕಿಟ್ಟಿದ್ದ ಅಮೆಜಾನ್ ಇದೀಗ ಆ ಚಿತ್ರವನ್ನು ಬದಲಾಯಿಸಿದೆ.
ಕಳೆದೆರಡು ದಿನಗಳ ಹಿಂದೆ ಗೂಗಲ್ ಕೂಡ ಕನ್ನಡದ ಬಗ್ಗೆ ಅವಮಾನದ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಮಣಿದು ಕ್ಷಮೆ ಯಾಚಿಸಿತ್ತು. ಇದೀಗ ಅಮೆಜಾನ್ ಕೂಡ ಕನ್ನಡಿಗರ ಆಕ್ರೋಶದ ಬೆನ್ನಲ್ಲೆ ಚಿತ್ರ ಬದಲಾಯಿಸಿ ಆ ಜಾಗದಲ್ಲಿ ಬೇರೊಂದು ಫೋಟೋವನ್ನು ಪ್ರಕಟಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನೆಲದ ಶ್ರೇಷ್ಠತೆಯ ಅರಿವಿಲ್ಲದ ವಿದೇಶಿ ಸಂಸ್ಥೆಗಳು ಕನ್ನಡದ ಅಸ್ಮಿತೆಗೆ ಅವಮಾನ ಮಾಡುವಂತಹ ಯಾವುದೇ ಕೆಲಸ ಮಾಡಿದರೂ ಅದನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ ಮತ್ತು ಅಮೆಜಾನ್ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.