ಸಮಗ್ರ ನ್ಯೂಸ್: ಮುಂಜಾನೆ ಕೋಳಿ ಕೂಗಿದ್ರೆ ಮಾತ್ರ ಬೆಳಕಾಯ್ತು ಅಂತ ಎದ್ದೇಳ್ತಿದ್ರು. ಆದರೆ ಈಗ ಕಾಲ ಬದಲಾಗಿದೇ ಕೋಳಿಗಳು ಮುಂಜಾನೆ ಕೂಗೋದಕ್ಕಿಂತ ಕುಕ್ಕರ್ನಲ್ಲಿ ಕೂಗೋದೇ ಜಾಸ್ತಿ ಆಗಿದೆ. ಆದ್ರೆ ಇದೇ ಕೋಳಿ ಗ್ಯಾಂಗ್ ಒಂದು ಮುಂಜಾನೆ ಕೊ ಕೊ ಕೋ ಅಂತ ಕೂಗಿ ನಮಗೆ ನಿದ್ದೇ ಮಾಡೋಕೆ ಬಿಡ್ತಿಲ್ಲ ಅಂತ ಬೆಂಗಳೂರಿನ ಜೆ.ಪಿ ನಗರದ 8ನೇ ಹಂತದಲ್ಲಿ ವಾಸವಿರುವ ಕುಟುಂಬವೊಂದು ಪೊಲೀಸರ ಮೊರೆ ಹೋಗಿದೆ. ಕೋಳಿಯ ಕೂಗಿನಿಂದ ನಮಗೆ ಮುಕ್ತಿ ನೀಡಿ ಅಂತ ಮನವಿ ಸಹ ಮಾಡಿದೆ.
ರಾಜಧಾನಿಯ ಕುಟುಂಬ ಒಂದು ನಮಗೆ ಈ ವೈಲೆನ್ಸ್ನಿಂದ ರಕ್ಷಣೆ ನೀಡಿ ಅಂತ ಪೊಲೀಸರ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಈ ವೈಲೆನ್ಸ್ ಅನ್ನ ಹುಟ್ಟುಹಾಕಿದ್ದು ಯಾವ್ದೋ ಪುಡಿ ರೌಡಿನೂ ಅಲ್ಲ, ಯಾವ ಗ್ಯಾಂಗ್ ಸ್ಟಾರೂ ಅಲ್ಲ ಬದಲಾಗಿ ಕೊ ಕೊ ಕೋ ಅಂತ ಕೂಗೋ ಕೋಳಿ ಹುಂಜ. ಜೆ.ಪಿ ನಗರದ 8ನೇ ಹಂತದಲ್ಲಿ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಕೋಳಿ ಹುಂಜ ಹಾಗೂ ಬಾತು ಕೋಳಿಗಳನ್ನ ಸಾಕಿದ್ದಾರೆ. ಈ ಕೋಳಿಗಳು ಬೇಳಗಾದ್ರೆ ಸಾಕು ಕೊ ಕೊ ಕೋ ಅಂತ ಕೂಗೋಕೆ ಶುರುಮಾಡ್ತಾವೆ. ಸದ್ಯ ಇವುಗಳ ಕೂಗಿನಿಂದ ಬೇಸತ್ತ ಎದುರು ಮನೆಯ ಕುಟುಂಬ, ಹುಂಜಗಳು ಮುಂಜಾನೆ ಕೂಗೋದ್ರಿಂದ ಮನೆಯಲ್ಲಿರುವ ಎರಡು ವರ್ಷದ ಮಗುವಿಗೆ ನಿದ್ದೆ ಬರ್ತಿಲ್ಲ. ನೆರೆ ಹೊರೆಯವರಿಗೂ ನಿದ್ದೆ ಬರ್ತಿಲ್ಲ ಅಂತ ಟ್ವಿಟರ್ನಲ್ಲಿ ಹೂಂಜಾ ಕೂಗುವ ವಿಡಿಯೋ ಅಪ್ಲೋಡ್ ಮಾಡಿ ಬೆಂಗಳೂರು ಪೊಲೀಸರನ್ನ ಟ್ಯಾಗ್ ಮಾಡಿದ್ದಾರೆ. ಅಲ್ಲದೇ ಕೋಳಿಗಳನ್ನ ಬೇರೆಡೆ ಸ್ಥಳಾಂತರ ಮಾಡುವಂತೆ ಸಹ ಮನವಿ ಮಾಡಿದ್ದಾರೆ.
ಈ ಟ್ವಿಟರ್ ಪೋಸ್ಟ್ ಬಗ್ಗೆ ಕ್ರಮ ತೆಗೆದುಕೊಂಡಿರುವ ಜೆ.ಪಿ ನಗರ ಪೊಲೀಸರು ಹುಂಜ ಸಾಕಿರುವ ವ್ಯಕ್ತಿಯ ಮನೆಗೆ ತೆರಳಿ ಪರಿಶೀಲನೆ ಸಹ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹುಂಜಗಳ ಮಾಲೀಕ ರವಿಕುಮಾರ್, ನಮ್ಮ ಖುಷಿಗೆ ನಾವು ಇವುಗಳನ್ನ ಸಾಕಿದ್ದೇವೆ, ಕೋಳಿ ಅಂದಮೇಲೆ ಕೂಗದೇ ಇರುತ್ತಾ? ಅಂತ ತಿಳಿಸಿದ್ದಾರೆ. ಹಳ್ಳಿ ಕಡೆ ಕಂಡು ಬರ್ತಿದ್ದ ಕೋಳಿ ಜಗಳ ರಾಜಧಾನಿ ಬೆಂಗಳೂರಿನಲ್ಲೂ ನಡೆದು ಹೋಗಿದೆ. ಅತ್ತ ಎದುರು ಮನೆಯವರು ಹುಂಜ ಕೂಗೋದೆ ಸಮಸ್ಯೆ ಅಂತಿದ್ರೆ, ಇತ್ತ ಹುಂಜದ ಮಾಲೀಕ ಊರು ಊರು ಬಿಟ್ಟು ಊರಿಗೆ ಬಂದಿರೋ ಅವರೇ ನಮಗೆ ಸಮಸ್ಯೆ ಅಂತ ಟಾಂಗ್ ನೀಡಿದ್ದಾರೆ.