Ad Widget .

ಬೆಳ್ತಂಗಡಿ: ದಲಿತನನ್ನು ಬರ್ಭರವಾಗಿ ಕೊಂದು ಬೆತ್ತಲೆಗೊಳಿಸಿ ದೋಚಿದ ದುಷ್ಕರ್ಮಿಗಳು| ನಾಲ್ವರ ವಿರುದ್ಧ ಪ್ರಕರಣ ದಾಖಲು

ಸಮಗ್ರ ನ್ಯೂಸ್: ದಲಿತ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಮಾಡಿದಲ್ಲದೆ , ಹಲ್ಲೆಗೊಳಗಾಗಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಕೊಠಡಿಯಲ್ಲಿ ಕೊಲೆ ಮಾಡಿ ಬೆತ್ತಲೆಗೊಳಿಸಿ ನಂತರ ತೋಟದಲ್ಲಿ ಹಾಕಿ ಕೊಲೆಯಾದವನ ಬಳಿ ಇದ್ದ ಹಣವನ್ನು ದೋಚಿ ಪರಾರಿಯಾದ ಘಟನೆ ಶಿಬಾಜೆಯಲ್ಲಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎಸಿ ಕುರಿಯನ್ ಮಾಲೀಕತ್ವದ ಸಾರ ಫಾರ್ಮ್ ತೋಟದಲ್ಲಿ ಮೇಲ್ವಿಚಾರನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ (30) ಎಂಬಾತನನ್ನು ಡಿ17ರಂದು ಸಂಜೆ ತೋಟದ ಕಚೇರಿ ಎದುರು ಇರುವ ಸರ್ವಜನಿಕ ರಸ್ತೆಯ ಬದಿಯಲ್ಲಿ ನಾಲ್ಕು ಜನ ಆರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆಕೆ ಆನಂದ ಪೂಜಾರಿ, ಮಹೇಶ್ ಪೂಜಾರಿ ಸೇರಿ ಹಲ್ಲೆ ಮಾಡಿದ್ದು ಈ ವಿಚಾರ ತಿಳಿದು ತೋಟದ ಕೆಲಸಗಾರಾದ ಅಬ್ರಾಹಂ ಮತ್ತು ಪರಮೇಶ್ವರ ಬಂದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು ಈ ವೇಳೆ ಹಲ್ಲೆಗೊಳಗಾಗಿದ್ದ ಶ್ರೀಧರನನ್ನು ಉಪಚರಿಸಿ ತೋಟದ ಮನೆಗೆ ಕರೆದುಕೊಂಡು ಬಂದು ಊಟ ನೀಡಿ ಕೊಠಡಿಯಲ್ಲಿ ವಿಶ್ರಾಂತಿಗೆ ಕಳುಹಿಸಿದ್ದರು.

Ad Widget . Ad Widget . Ad Widget .

ಡಿ.18 ರಂದು ಬೆಳಗ್ಗೆ ಶ್ರೀಧರನನ್ನು ಕರೆದಾಗ ಯಾವುದೇ ರೀತಿಯಲ್ಲಿ ಉತ್ತರಿಸದಿದ್ದಾಗ ಕೊಠಡಿಗೆ ಹೋದಾಗ ನಾಪತ್ತೆಯಾಗಿದ್ದ ಈ ಬಗ್ಗೆ ತೋಟದ ಸುತ್ತಮುತ್ತ ಹುಡುಕಾಟ ನಡೆಸಿದಾಗ ಸುಮಾರು 250-300 ಮೀಟರ್ ದೂರದಲ್ಲಿ ತೋಟದಲ್ಲಿ ಬೆತ್ತಲೆಯಾಗಿ ಸಾವನ್ನಪ್ಪಿರುವುದು ಕಂಡು ಬಂದಿದೆ ತಕ್ಷಣ ಈ ಬಗ್ಗೆ ತೋಟದ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತೋಟದ ಸುತ್ತಮುತ್ತಲಿನಲ್ಲಿ ಪರಿಶೀಲನೆ ಮಾಡಿದ್ದಾಗ ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿ ಕತ್ತರಿಸಿ ನಾಲ್ಕು ಜನ ಆರೋಪಿಗಳು ಕೊಠಡಿಗೆ ಬಂದು ಕೊಲೆ ಮಾಡಿ ನಂತರ ತೋಟದ ಮಧ್ಯೆ ಹಾಕಿದ್ದು ಅದಲ್ಲದೆ ಕೊಲೆಯಾದವನ ಬಳಿ ಇದ್ದ 9500/- ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಹರೀಶ್ ಮುಗೇರ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಹೆಚ್ಚಿನ ತನಿಖೆಗಾಗಿ ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕೊಲೆ ಮಾಡಿದ ಆರೋಪಿಗಳಾದ ತಿಮ್ಮಪ್ಪ ಪೂಜಾರಿ , ಲಕ್ಷ್ಮಣ ಪೂಜಾರಿ, ಕೆ.ಕೆ ಆನಂದ ಗೌಡ, ಮಹೇಶ್ ಪೂಜಾರಿ ಎಂದು ಗುರುತಿಸಲಾಗಿದ್ದು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ನಾಲ್ಕು ಜನ ಆರೋಪಿಗಳ ವಿರುದ್ಧ 323,302,392 ಜೊತೆಗೆ 34 IPC ಮತ್ತು ಕಲಂ 3(2) (va),3(2)(v) ಎಸ್ಟಿ /ಎಸ್ಸಿ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *