ಪ್ರೊ ಕಬಡ್ಡಿ; ಜೈಪುರ್ ಪಿಂಕ್ ಪ್ಯಾಂಥರ್ಸ್ ಮಡಿಲಿಗೆ ಸೀಸನ್-9ರ ಕಿರೀಟ

ಸಮಗ್ರ ನ್ಯೂಸ್: ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಭರ್ಜರಿ ಗೆಲುವಿನ ಮೂಲಕ 9ನೇ ಆವೃತ್ತಿ ಟ್ರೋಫಿ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಹೋರಾಟ ನಡೆಸಿದ ಜೈಪುರ್ ಪಿಂಕ್ ಪ್ಯಾಂಥರ್ಸ್ 33-29 ಅಂಕಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು.

Ad Widget ... ..

ಈ ಮೂಲಕ ಜೈಪುರ ಪಿಂಕ್ ಪ್ಯಾಂಥರ್ಸ್ 2ನೇ ಪ್ರೋ ಕಬಡ್ಡಿಲೀಗ್ ಟ್ರೋಫಿ ವಶಪಡಿಸಿಕೊಂಡಿದೆ. ಇತ್ತ ಚೊಚ್ಚಲ ಟ್ರೋಫಿ ಗೆಲ್ಲುವ ಪುಣೇರಿ ಪಲ್ಟಾನ್ ಕನಸು ಛಿದ್ರಗೊಂಡಿದೆ. ಆದರೆ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಹೋರಾಟ ನೀಡಿದ ಪುಣೇರಿ ತಂಡಕ್ಕೆ ಮೆಚ್ಚುಗೆ ಸುರಿಮಳೆ ವ್ಯಕ್ತವಾಗುತ್ತಿದೆ.

Ad Widget

ಬಲಿಷ್ಠ ತಂಡಗಳೆರಡರ ನಡುವಿನ ಜಿದ್ದಾಜಿದ್ದಿ ಕದನ ನಿಜವಾದ ಫೈನಲ್‌ ಜೋಶ್‌ಗೆ ಸಾಕ್ಷಿಯಾಯಿತು. ಆದರೆ ಆರಂಭದಿಂದಲೇ ಸಣ್ಣ ಅಂತರದ ಮುನ್ನಡೆ ಕಾಯ್ದು ಕೊಂಡು ಬಂದ ಜೈಪುರ್‌ ಇದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾ ಯಿತು. ವಿರಾಮದ ವೇಳೆ 14-12 ಲೀಡ್‌ ಹೊಂದಿತ್ತು.

ವಿರಾಮದ ಬಳಿಕವೂ ಜೈಪುರ್‌ ಮುನ್ನಡೆಯನ್ನು ಕಾಯ್ದುಕೊಳ್ಳುತ್ತ ಹೋಯಿತು. ಪುಣೆಗೆ ಓವರ್‌ಟೇಕ್‌ ಸಾಧ್ಯವಾಗಲೇ ಇಲ್ಲ. ರೈಡರ್‌ಗಳಾದ ಅರ್ಜುನ್‌ ದೇಶ್ವಾಲ್‌, ವಿ. ಅಜಿತ್‌, ನಾಯಕ ಹಾಗೂ ಡಿಫೆಂಡರ್‌ ಸುನೀಲ್‌ ಕುಮಾರ್‌ ಜೈಪುರ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂವರದೂ 6 ಅಂಕಗಳ ಸಾಧನೆ. ಪುನೇರಿ ಪರ ರೈಡರ್‌ ಆಕಾಶ್‌ ಶಿಂಧೆ, ಡಿಫೆಂಡರ್‌ ಅಭಿಷೇಕ್‌ ನಾದರಾಜನ್‌ ಮತ್ತು ಆಲ್‌ರೌಂಡರ್‌ ಮೊಹಮ್ಮದ್‌ ನಬಿಬಕ್‌Ò ತಲಾ 4 ಅಂಕ ಗಳಿಸಿದರು.

2014ರ ಚೊಚ್ಚಲ ಆವೃತ್ತಿಯ ಚಾಂಪಿಯನ್‌ ಆಗಿದ್ದ ಜೈಪುರ್‌, 2016ರಲ್ಲೂ ಫೈನಲ್‌ ಪ್ರವೇಶಿಸಿತ್ತಾದರೂ ಅಲ್ಲಿ ಪಾಟ್ನಾ ಪೈರೆಟ್ಸ್‌ಗೆ ಶರಣಾಗಿತ್ತು.

Leave a Comment

Your email address will not be published. Required fields are marked *